ಕರ್ನಾಟಕ

karnataka

ETV Bharat / state

ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ.. ಸೋಂಕು ನಿಯಂತ್ರಣಕ್ಕೆ ಡಿಸಿ ಕ್ರಮ..

ಕಳೆದ ನಾಲ್ಕು ದಿನಗಳಿಂದ ಸೋಂಕಿನ ಸಂಖ್ಯೆ 28ಕ್ಕೆ ಏರಿದೆ. ಅದಕ್ಕಾಗಿ ಕೊರೊನಾ ಸೋಂಕು ತಡೆಗೆ ಜಿಲ್ಲಾಡಳಿತ ಸಜ್ಜಾಗಿದೆ. ಈಗಾಗಲೇ 47 ಖಾಸಗಿ ಆಸ್ಪತ್ರೆಯಲ್ಲಿ ಶೇ.50ರಷ್ಟು ಬೆಡ್ ಮೀಸಲಿಡುವಂತೆ ಸೂಚಿಸಲಾಗಿದೆ..

dc-v-v-jyotsna
ಡಿಸಿ ವಿವಿ ಜೋತ್ಸ್ನಾ

By

Published : Jan 7, 2022, 6:41 PM IST

ಕಲಬುರಗಿ :ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಗಳು ಕಳೆದೊಂದು ವಾರದಿಂದ ಹೆಚ್ಚಾಗುತ್ತಿವೆ. ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ವಿ. ವಿ ಜ್ಯೋತ್ಸ್ನಾ ಹೇಳಿದ್ದಾರೆ.

ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ನಾವು ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂದು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಹೇಳಿದರು.

ಕೊರೊನಾ ಕುರಿತಂತೆ ಡಿಸಿ ವಿವಿ ಜೋತ್ಸ್ನಾ ಮಾಹಿತಿ ನೀಡಿರುವುದು..

ಸದ್ಯಕ್ಕೆ ಕಲಬುರಗಿಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ನೂರರ ಗಡಿ ದಾಟಿದೆ. ಪಾಸಿಟಿವಿಟಿ ರೇಟಿಂಗ್​ ಶೇ.1ರಷ್ಟು ಮಾತ್ರ ಇದೆ. ಎಲ್ಲರೂ ಎರಡು ಡೋಸ್ ಲಸಿಕೆ ಕಡ್ಡಾಯವಾಗಿ ಪಡೆಯವುದರ ಮೂಲಕ 3ನೇ ಅಲೆ ತಡೆಯುವುದಕ್ಕೆ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಕಳೆದ ನಾಲ್ಕು ದಿನಗಳಿಂದ ಸೋಂಕಿನ ಸಂಖ್ಯೆ 28ಕ್ಕೆ ಏರಿದೆ. ಅದಕ್ಕಾಗಿ ಕೊರೊನಾ ಸೋಂಕು ತಡೆಗೆ ಜಿಲ್ಲಾಡಳಿತ ಸಜ್ಜಾಗಿದೆ. ಈಗಾಗಲೇ 47 ಖಾಸಗಿ ಆಸ್ಪತ್ರೆಯಲ್ಲಿ ಶೇ.50ರಷ್ಟು ಬೆಡ್ ಮೀಸಲಿಡುವಂತೆ ಸೂಚಿಸಲಾಗಿದೆ ಎಂದರು.

ಕೊರೊನಾ ಚಿಕಿತ್ಸೆಗಾಗಿ ಆಕ್ಸಿಜನ್ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದ ಅವರು, ಕೊರೊನಾ ಹೆಚ್ಚಾಗಿ ಹರಡದಂತೆ ನೋಡಿಕೊಳ್ಳಲು ಜನ ಸಹಕರಿಸಬೇಕು ಎಂದು ಮನವಿ ಮಾಡಿದರು.

ವೀಕೆಂಡ್​ ಕಫ್ಯೂ೯, ಲಾಕ್​ಡೌನ್​ಗೆ ವಿರೋಧ :ಕೋವಿಡ್​ ಪ್ರಕರಣಗಳು ದಿನೇದಿನೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಹೊಸ ಮಾಗ೯ಸೂಚಿಯನ್ನು ಬಿಡುಗಡೆ ಮಾಡಿ, ನೈಟ್ ಕಫ್ಯೂ೯ವನ್ನ ಎರಡು ವಾರಗಳ ಕಾಲ ವಿಸ್ತರಿಸಿ, ವಿಕೇಂಡ್ ಕಫ್ಯೂ೯ ಹೇರಿದೆ.

ಆದರೆ, ಮೊದಲೇ ಆಥಿ೯ಕ ಪರಿಸ್ಥಿತಿಯಿಂದ ಚೇತರಿಕೆ ಕಂಡುಕೊಳ್ಳಲು ಹೆಣಗಾಡುತ್ತಿರುವ ಮಧ್ಯಮ ವರ್ಗದ ಜನ, ಹಮಾಲರು ಮತ್ತು ಆಟೋ ಚಾಲಕರು ಸರ್ಕಾರದ ನಿಣ೯ಯವನ್ನು ವಿರೋಧ ಮಾಡುತ್ತಿದ್ದಾರೆ.

ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಸಾವಿರಾರು ಹಮಾಲರು ತಮ್ಮ ದಿನದ ಸಂಬಳಕ್ಕೆ ಮತ್ತೆ ಎಲ್ಲಿ ಲಾಕ್​ಡೌನ್​ನಿಂದ ಹೊಡೆತ ಬೀಳುತ್ತೆ ಎನ್ನುವ ಆತಂಕದಲ್ಲಿದ್ದಾರೆ. ನಾವು ದಿನ ದುಡಿದು ದಿನ ತಿನ್ನುವಂತಹ ಜನ. ಮೊದಲ ಬಾರಿ ಲಾಕ್​ಡೌನ್​ ಮಾಡಿದಾಗ ನಾವು ಸಾಲ ಸೂಲ ಮಾಡಿ ನಮ್ಮ ಜೀವನವನ್ನು ನಡೆಸಿದ್ದೇವೆ.

ಈಗ ಮತ್ತೆ ಲಾಕ್​ಡೌನ್​ ಮಾಡಲು ಹೊರಟಿರುವ ಸರ್ಕಾರದ ನಿಯಮ ಸರಿ ಇಲ್ಲ. ಕೂಲಿ ಕಾಮಿ೯ಕರ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಿ ನಿಣ೯ಯ ಕೈಗೊಳ್ಳಲಿ ಎಂದು ಹಮಾಲರು ಒತ್ತಾಯ ಮಾಡಿದ್ದಾರೆ.

ಓದಿ:ಪಿಎಂ ಮೋದಿ ದೀರ್ಘಾಯಸ್ಸಿಗೆ ಪ್ರಾರ್ಥಿಸಿ ಹುಬ್ಬಳ್ಳಿಯ ಈಶ್ವರ ದೇವಸ್ಥಾನದಲ್ಲಿ ಹೋಮ-ಹವನ

ABOUT THE AUTHOR

...view details