ಗಂಗಾವತಿ:ತಾಲೂಕಿನಲ್ಲೂ ದಸರಾ ವೈಭವ ಜೋರಾಗಿದ್ದು, ಆನೆಗುಂದಿಯ ಮೇಲುಕೋಟೆಯಲ್ಲಿರುವ ದುರ್ಗಾ ದೇವಿಗೆ ವಿಶೇಷ ಪೂಜೆ ಅಲಂಕಾರಗಳು ನೆರವೇರಿದವು.
ಪ್ರತಿವರ್ಷದಂತೆ ಈ ವರ್ಚವೂ ನವರಾತ್ರಿಯಲ್ಲಿ ದುರ್ಗಾದೇವಿಯ ಸನ್ನಿಧಿಯಲ್ಲಿ ದಸರಾ ವೈಭವದ ಸಂಭ್ರಮ ಮನೆ ಮಾಡಿದ್ದು, ಧಾರ್ಮಿಕ ಆಚರಣೆಗಳು ನಡೆಯುತ್ತವೆ. ಈ ಬಾರಿ ಕೊರೊನಾ ನಡುವೆ ಆಚರಣೆಗಳು ಜನರನ್ನು ಸೆಳೆಯುತ್ತಿದೆ.
ಇಂದು ದಸರಾ ಹಬ್ಬದ ಕೊನೆಯ ದಿನವಾಗಿದ್ದು, ದೇವಿಗೆ ರಜತಾಲಂಕಾರ ಮಾಡಲಾಗಿತ್ತು. ಸುಮಾರು ಐದು ಕೆಜಿ ತೂಕದ ರಜತ ಕವಚವನ್ನು ಅಮ್ಮನವರ ವಿಗ್ರಹಕ್ಕೆ ಅಲಂಕಾರ ಮಾಡಲಾಗಿತ್ತು.
ಸುಮಾರು ಐದು ಕೆಜಿ ತೂಕದ ರಜತ ಕವಚವನ್ನು ಅಮ್ಮನವರ ವಿಗ್ರಹಕ್ಕೆ ಅಲಂಕಾರ ಮಾಡಲಾಗಿತ್ತು. ದೇಗುಲದ ಪ್ರಧಾನ ಅರ್ಚಕರಾದ ಬ್ರಹ್ಮಯ್ಯ ಹಾಗೂ ರಾಜಣ್ಣ ನೇತೃತ್ವದಲ್ಲಿ ನಾನಾ ಧಾರ್ಮಿಕ ಕಾರ್ಯ ನಡೆದವು.