ಗಂಗಾವತಿ:ಮಾಜಿ ಸಚಿವ ಡಿ.ಕೆ.ಶಿವಕುಮಾರ ಬಂಧನ ಖಂಡಿಸಿ ಒಕ್ಕಲಿಗ ಸಮಾಜದವರು ಮಾಡುತ್ತಿರುವ ಪ್ರತಿಭಟನೆ ಸರಿಯಲ್ಲ ಎಂದು ಜೆಡಿಎಸ್ ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಮಾಜಿ ಶಾಸಕ ಹೆಚ್.ಆರ್. ಶ್ರೀನಾಥ್ ಹೇಳಿದ್ದಾರೆ.
ರೆಡ್ಡಿ ಜೈಲಿಗೆ ಹೋದಾಗಲೂ ಪ್ರತಿಭಟನೆ ಮಾಡಬಹುದಿತ್ತಲ್ಲವೇ... ಮಾಜಿ ಶಾಸಕ ಶ್ರೀನಾಥ್ ಪ್ರಶ್ನೆ - ಜನಾರ್ದನ ರೆಡ್ಡಿ
ಈ ಹಿಂದೆ ಜನಾರ್ದನ ರೆಡ್ಡಿ ಬಂಧನವಾಗಿತ್ತು. ಆಗ ರೆಡ್ಡಿ ಸಮಾಜ ಬೀದಿಗೆ ಇಳಿದು ಹೋರಾಟ ಮಾಡಬಹುದಾಗಿತ್ತಲ್ಲವೆ? ಇಂತಹ ಹೋರಾಟಗಳು ನ್ಯಾಯಮ್ಮತವಲ್ಲ ಎಂದು ಮಾಜಿ ಶಾಸಕ ಶ್ರೀನಾಥ್ ಅಭಿಪ್ರಾಯಪಟ್ಟಿದ್ದಾರೆ.
ಎಚ್.ಆರ್. ಶ್ರೀನಾಥ್
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಜನಾರ್ದನ ರೆಡ್ಡಿ ಬಂಧನವಾಗಿತ್ತು. ಆಗ ರೆಡ್ಡಿ ಸಮಾಜ ಬೀದಿಗೆ ಇಳಿದು ಹೋರಾಟ ಮಾಡಬಹುದಾಗಿತ್ತಲ್ಲವೆ? ಇಂತಹ ಹೋರಾಟಗಳು ನ್ಯಾಯಸಮ್ಮತವಲ್ಲ. ಅದು ಸರಿಯೂ ಅಲ್ಲ. ಒಂದು ಸಮಾಜ ಇತರೆ ಸಮುದಾಯಗಳಿಗೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ. ತಪ್ಪು ಯಾರೇ ಮಾಡಿರಲಿ, ಕಾನೂನು ಪ್ರಕಾರ ಅವರನ್ನು ಪ್ರಶ್ನಿಸುವ ಹಕ್ಕು ಸಂವಿಧಾನದತ್ತ ರಚಿತವಾಗಿರುವ ತನಿಖಾ ಸಂಸ್ಥೆಗಳಿಗೆ ಇರುತ್ತದೆ ಎಂದರು.