ಕೊಪ್ಪಳ:ಜಿಲ್ಲೆಯಾದ್ಯಂತ ನಿನ್ನೆನಿಂದ ವಾತಾವರಣದಲ್ಲಿ ಕೊಂಚ ಬದಲಾವಣೆಯಾಗಿದ್ದು, ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ.
ಕೊಪ್ಪಳ: ಮುಸುಕಿನಲ್ಲಿ ಮುದ ನೀಡುತ್ತಿರುವ ಸೋನೆ ಮಳೆ - ಚಂಡಮಾರುತ ಪರಿಣಾಮ
ಜಿಲ್ಲೆಯಾದ್ಯಂತ ನಿನ್ನೆನಿಂದ ವಾತಾವರಣದಲ್ಲಿ ಕೊಂಚ ಬದಲಾವಣೆಯಾಗಿದ್ದು, ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ.
slowly rain falling in Koppal
ಚಂಡಮಾರುತ ಪರಿಣಾಮ ನಿನ್ನೆನಿಂದ ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಿದೆ. ಆಗಾಗ ಕೊಂಚ ಮಳೆಯಾಗುತ್ತಿದ್ದು, ಕೂಲ್ ಕೂಲ್ ಅನುಭವ ನೀಡುತ್ತಿದೆ. ಸುರಿಯುತ್ತಿರುವ ಸೋನೆ ಮಳೆಗೆ ಮೈಯೊಡ್ಡಿ ಜನರು ಆಹ್ಲಾದ ಅನುಭವಿಸುತ್ತಿದ್ದಾರೆ. ಚಳಿಗಾಲವಾದರೂ ಬಿಸಿಲಿನಿಂದ ಸುಡುತ್ತಿದ್ದ ಬೆಟ್ಟಗುಡ್ಡಗಳು ಈ ವಾತಾವರಣಕ್ಕೆ ಮೈಯೊಡ್ಡಿ ತಂಪಾಗಿವೆ. ಒಂದು ರೀತಿಯಲ್ಲಿ ಮಲೆನಾಡ ವಾತಾವರಣ ನಿರ್ಮಾಣವಾಗಿದೆ.