ಕರ್ನಾಟಕ

karnataka

ETV Bharat / state

7 ತಿಂಗಳಿಂದ ಮನೆಯಲ್ಲಿದ್ದುಕೊಂಡು ಕೋವಿಡ್​ ನಿಯಮ ಪಾಲಿಸುತ್ತಿರುವ ಕುಟುಂಬ...

ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸಲು ಸರ್ಕಾರ ಜಾರಿಗೊಳಿಸಿದ ಬಹುತೇಕ ಎಲ್ಲಾ ನಿಯಮಗಳನ್ನು ಪಾಲಿಸಿಕೊಂಡು ಕೊಪ್ಪಳ ತಾಲೂಕಿನ ಗಡಿ ಗ್ರಾಮವಾಗಿರುವ ಘಟ್ಟಿರಡ್ಡಿಹಾಳ ಗ್ರಾಮದ ಅಂದಾನಪ್ಪ ಡಂಬಳ ಎಂಬುವವರ ಕುಟುಂಬ ಮಾರ್ಚ್ 24 ರಿಂದ ಈವರೆಗೂ ಅಂದರೆ ಸುಮಾರು 7 ತಿಂಗಳಿಂದ ಮನೆಯಲ್ಲಿಯೇ ಉಳಿದುಕೊಂಡಿದೆ.

koppala
ಘಟ್ಟಿರಡ್ಡಿಹಾಳ ಗ್ರಾಮದ ಅಂದಾನಪ್ಪ ಡಂಬಳ ಎಂಬುವವರ ಕುಟುಂಬ

By

Published : Oct 14, 2020, 9:00 PM IST

ಕೊಪ್ಪಳ: ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸಲು ಸರ್ಕಾರ ಲಾಕ್‍ಡೌನ್ ಸೇರಿದಂತೆ ಅನೇಕ ಕ್ರಮಗಳನ್ನು ಕೈಗೊಂಡಿತು. ಅನವಶ್ಯಕವಾಗಿ ಮನೆಯಿಂದ ಹೊರಬರಬೇಡಿ ಎಂದು ಹೇಳಿದರೂ ಜನರು ಮಾತ್ರ ಅನಗತ್ಯವಾಗಿ ಓಡಾಡೋದನ್ನು ಮಾತ್ರ ನಿಲ್ಲಿಸಿಲ್ಲ. ಆದರೆ, ಇಲ್ಲೊಂದು ಕುಟುಂಬ ಲಾಕ್‍ಡೌನ್ ಸಮಯದಿಂದ ಈವರೆಗೂ ಸಹ ಮನೆಯನ್ನು ಬಿಟ್ಟು ಕದಲಿಲ್ಲ. ಈ ಮೂಲಕ ಆ ಕುಟುಂಬ ಈಗ ಗಮನ ಸೆಳೆಯುತ್ತಿದೆ.

ಕೊರೊನಾ ಸೋಂಕನ್ನು ನಿಯಂತ್ರಿಸಲು ಸರ್ಕಾರ ಜಾರಿಗೊಳಿಸಿದ ಬಹುತೇಕ ಎಲ್ಲಾ ನಿಯಮಗಳನ್ನು ಈ ಕುಟುಂಬ ಪಾಲಿಸುವ ಮೂಲಕ ಇಲ್ಲಿಯವರೆಗೂ ಸಹ ಮನೆಯಿಂದ ಆಚೆ ಕದಲದೆ ಗಮನ ಸೆಳೆದಿದೆ. ಕೊಪ್ಪಳ ತಾಲೂಕಿನ ಗಡಿ ಗ್ರಾಮವಾಗಿರುವ ಘಟ್ಟಿರಡ್ಡಿಹಾಳ ಗ್ರಾಮದ ಅಂದಾನಪ್ಪ ಡಂಬಳ ಎಂಬುವವರ ಕುಟುಂಬ ಮಾರ್ಚ್ 24 ರಿಂದ ಈವರೆಗೂ ಅಂದರೆ ಸುಮಾರು 7 ತಿಂಗಳಿಂದ ಮನೆಯಲ್ಲಿಯೇ ಉಳಿದುಕೊಂಡಿದೆ.

ಕೋವಿಡ್​ ನಿಯಮವನ್ನು ಪಾಲಿಸುತ್ತಿರುವ ಘಟ್ಟಿರಡ್ಡಿಹಾಳ ಗ್ರಾಮದ ಅಂದಾನಪ್ಪ ಡಂಬಳ ಎಂಬುವವರ ಕುಟುಂಬ

ಮನೆಯಲ್ಲಿ ವೃದ್ಧರು, ಮಕ್ಕಳು ಇರುವುದರಿಂದ ಕೊರೊನಾ ಸೋಂಕು ತಗುಲಬಾರದು ಎಂಬ ಉದ್ದೇಶದಿಂದ ಈ ಕುಟುಂಬ ಕೊರೊನಾ ಸೋಂಕು ತಗುಲದಂತೆ ಕೈಗೊಳ್ಳಬೇಕಾದ ಸಾಮಾಜಿಕ ಅಂತರ, ಮಾಸ್ಕ್​ ಧರಿಸುವುದು ಸ್ಯಾನಿಟೈಸರ್ ಬಳಕೆ ಸೇರಿದಂತೆ ಅಗತ್ಯ ಕ್ರಮಗಳನ್ನು ಸ್ವಯಂ ಪ್ರೇರಿತವಾಗಿ ಕಟ್ಟುನಿಟ್ಟಾಗಿ ಪಾಲಿಸುತ್ತಾ ಬಂದಿದೆ. ರೇಷನ್ ತೆಗೆದುಕೊಳ್ಳಲು ಹೋದರೂ ಸಹ ಒಬ್ಬರೇ ಹೋಗಿ ರೇಷನ್, ತರಕಾರಿ ಹಾಗೂ ಇನ್ನಿತರೆ ಅಗತ್ಯ ವಸ್ತುಗಳನ್ನು ತಂದು ಅವುಗಳನ್ನು ಮೂರು ದಿನಗಳ ಕಾಲ ಹೊರಗಡೆ ಇಟ್ಟು ಉಪಯೋಗಿಸುತ್ತಾರೆ.

ಇನ್ನು ಈವರೆಗೆ ಯಾವುದೇ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿಲ್ಲ. ಅಲ್ಲದೆ, ಯಾರಾದರೂ ಮಾತನಾಡಿಸಲು ಬಂದರೆ ಸಾಮಾಜಿಕ ಅಂತರ ಕಾಯ್ದುಕೊಂಡು ಮನೆಯ ಹೊರಗೆ ನಿಲ್ಲಿಸಿ ಮಾತನಾಡುತ್ತಾರೆ. ಕೊರೊನಾ ಸೋಂಕು ತಡೆಗಟ್ಟಬೇಕಾದರೆ ಅನಗತ್ಯವಾಗಿ ಮನೆಯಿಂದ ಹೊರಗಡೆ ಬರಬಾರದು ಎಂಬ ಸರ್ಕಾರದ ಆದೇಶವನ್ನು ನಾವು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇವೆ. ಹೀಗಾಗಿ, ನಾವು ಕಳೆದ 7 ತಿಂಗಳಿಂದ ಮನೆಯಿಂದ ಆಚೆ ಬಂದಿಲ್ಲ ಎಂದು ಅಂದಾನಪ್ಪ ಡಂಬಳ ಹೇಳಿದರು.

ABOUT THE AUTHOR

...view details