ಗಂಗಾವತಿ: ಕೊರೊನಾ ಪಾಸಿಟಿವ್ ಇದೆ ಎಂದು ಗೊತ್ತಾದರೆ ನೆರೆಹೊರೆಯವರು ತಮ್ಮನ್ನು ನೋಡುವ ದೃಷ್ಟಿಕೋನವೇ ಬದಲಾಗುತ್ತೆ ಎಂಬ ಆತಂಕದಿಂದ ಸೋಂಕಿತ ಮಹಿಳೆಯೊಬ್ಬರು ಆಸ್ಪತ್ರೆಯ ಆಂಬ್ಯುಲೆನ್ಸ್ ಸೇವೆ ಕಡೆಗಣಿಸಿ ಕಾಲ್ನಡಿಗೆಯಲ್ಲಿಯೇ ಕ್ವಾರಂಟೈನ್ ಕೇಂದ್ರಕ್ಕೆ ತೆರಳಿದ ಘಟನೆ ನಗರದಲ್ಲಿ ನಡೆದಿದೆ.
ಆಂಬ್ಯುಲೆನ್ಸ್ ಬೇಡವೆಂದು ಕಾಲ್ನಡಿಗೆಯಲ್ಲಿ ಕ್ವಾರಂಟೈನ್ ಕೇಂದ್ರಕ್ಕೆ ತೆರಳಿದ ಸೋಂಕಿತೆ: ಕಾರಣ?
ಕೊರೊನಾ ಸೋಂಕಿತೆ ಎಂದು ಗೊತ್ತಾದರೆ ನೆರೆಹೊರೆಯವರು ತಮ್ಮನ್ನು ನೋಡುವ ದೃಷ್ಟಿಕೋನವೇ ಬದಲಾಗುತ್ತದೆ ಎಂದು ಭಯಭೀತಳಾದ ಗಂಗಾವತಿಯ ಮಹಿಳೆಯೊಬ್ಬರು ಆಂಬ್ಯುಲೆನ್ಸ್ ಸೇವೆಯನ್ನು ಕಡೆಗಣಿಸಿ ಕಾಲ್ನಡಿಗೆಯಲ್ಲಿಯೇ ಕ್ವಾರಂಟೈನ್ ಕೇಂದ್ರಕ್ಕೆ ತೆರಳಿದ್ದಾರೆ.
ನಗರಸಭೆಯ ವ್ಯಾಪ್ತಿಯ ಮುರಾರಿಕ್ಯಾಂಪಿನ 35 ವರ್ಷದ ಮಹಿಳೆಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರು ಸೋಂಕು ತಗುಲಿರುವುದು ಖಚಿತವಾಗುತ್ತಲೇ ತನ್ನ ಮನೆಯಿಂದ ಕಾಲ್ನಡಿಗೆಯಲ್ಲಿ ನೇರವಾಗಿ ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಬೆಂಗಳೂರಿನಲ್ಲಿ ದೋಬಿ ಕೆಲಸ ಮಾಡುತ್ತಿದ್ದ ಗಂಡ ಮತ್ತು ಹೆಂಡತಿ ಇಬ್ಬರು ಕಳೆದ ಹತ್ತು ದಿನಗಳ ಹಿಂದೆ ಗಂಗಾವತಿಗೆ ಆಗಮಿಸಿದ್ದರು. ಜುಲೈ 2ರಂದು ಈ ಮಹಿಳೆಯ ಗಂಟಲು ದ್ರವ ಪಡೆಯಲಾಗಿತ್ತು.
ಆದರೆ ಭಾನುವಾರ ಸೋಂಕು ದೃಢಪಡುತ್ತಿದ್ದಂಯೇ ನಗರದ ಹೊರ ಭಾಗದಲ್ಲಿರುವ ಕ್ವಾರಂಟೈನ್ ಕೇಂದ್ರಕ್ಕೆ ಆಗಮಿಸಿ ದಾಖಲಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೊರೊನಾ ಪಾಸಿಟಿವ್ ವ್ಯಕ್ತಿಗಳನ್ನು ಸಮಾಜದಲ್ಲಿ ಅಗೌರವದಿಂದ ಕಾಣುತ್ತಿರುವ ಹಿನ್ನೆಲೆ ತಾನು, ಆಂಬ್ಯುಲೆನ್ಸ್ನಲ್ಲಿ ತೆರಳಿದರೆ ನೆರೆಹೊರೆಯವರು ನೋಡುವ ದೃಷ್ಟಿಕೋನ ಬದಲಾಗುತ್ತದೆ ಎಂಬ ಭೀತಿಯಿಂದ ಈ ರೀತಿ ಕಾಲ್ನಡಿಗೆಯಲ್ಲೇ ಆಸ್ಪತ್ರೆಗೆ ಬಂದಿರುವುದಾಗಿ ಮಹಿಳೆ ತಿಳಿಸಿದ್ದಾರೆ.