ಕರ್ನಾಟಕ

karnataka

ETV Bharat / state

ಕೊರೊನಾ ಲಾಕ್​ಡೌನ್​: ವಾಹನ ಸೌಲಭ್ಯ ಇಲ್ಲದೇ 7ಕಿ.ಮೀ ನಡೆದು ಆಸ್ಪತ್ರೆ ಸೇರಿದ ಗರ್ಭಿಣಿ - pregnant women came to hospital

ಕೊಪ್ಪಳ ತಾಲೂಕಿನ ನರೇಗಲ್ ಗ್ರಾಮದಿಂದ ಗರ್ಭಿಣಿ ಹಾಗೂ ಆಕೆಯ ತಾಯಿ ಕೊಪ್ಪಳಕ್ಕೆ ಕಾಲ್ನಡಿಗೆಯಲ್ಲಿ ಬಂದಿದ್ದಾರೆ. ನಗರದಿಂದ ಸುಮಾರು ಆರೇಳು ಕಿಮೀ. ದೂರದಲ್ಲಿರುವ ನರೇಗಲ್ ಗ್ರಾಮದಿಂದ ಗರ್ಭಿಣಿ ಲಕ್ಷ್ಮಿ ಹಾಗೂ ಆಕೆಯ ತಾಯಿ ಬಸಮ್ಮ ಕಾಲ್ನಡಿಗೆಯಲ್ಲಿಯೇ ಬಂದಿರುವುದಾಗಿ ತಿಳಿಸಿದ್ದಾರೆ.

ಗರ್ಭಿಣಿ
ಗರ್ಭಿಣಿ

By

Published : May 10, 2021, 3:43 PM IST

ಕೊಪ್ಪಳ: ಕೊರೊನಾ ಲಾಕ್​ಡೌನ್​ನಿಂದ ವಾಹನ ಸೌಲಭ್ಯವಿಲ್ಲದೇ ಗರ್ಭಿಣಿಯೊಬ್ಬಳು ತಮ್ಮೂರಿನಿಂದ ನಡೆದುಕೊಂಡು ಕೊಪ್ಪಳದ ಆಸ್ಪತ್ರೆಗೆ ಬಂದಿದ್ದಾಳೆ.

ಕೊಪ್ಪಳ ತಾಲೂಕಿನ ನರೇಗಲ್ ಗ್ರಾಮದಿಂದ ಗರ್ಭಿಣಿ ಹಾಗೂ ಆಕೆಯ ತಾಯಿ ಕೊಪ್ಪಳಕ್ಕೆ ಕಾಲ್ನಡಿಗೆಯಲ್ಲಿ ಬಂದಿದ್ದಾರೆ. ನಗರದಿಂದ ಸುಮಾರು ಆರೇಳು ಕಿಮೀ. ದೂರದಲ್ಲಿರುವ ನರೇಗಲ್ ಗ್ರಾಮದಿಂದ ಗರ್ಭಿಣಿ ಲಕ್ಷ್ಮಿ ಹಾಗೂ ಆಕೆಯ ತಾಯಿ ಬಸಮ್ಮ ಕಾಲ್ನಡಿಗೆಯಲ್ಲಿಯೇ ಬಂದಿರುವುದಾಗಿ ತಿಳಿಸಿದ್ದಾರೆ.

ವಾಹನ ಸೌಲಭ್ಯವಿಲ್ಲದೇ 7ಕಿ.ಮೀ ನಡೆದು ಆಸ್ಪತ್ರೆ ಸೇರಿದ ಗರ್ಭಿಣಿ

ಗರ್ಭಿಯಾಗಿರುವುದರಿಂದ ನಗರದ ಮಂಗಳಾ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳಲು ಬಂದಿದ್ದೇವೆ. ಈಗ ಬಸ್ ಇಲ್ಲ ಹಾಗೂ ಮನೆಯಲ್ಲಿ ಗಂಡಸರು ಇಲ್ಲದ ಕಾರಣ ತಾಯಿಯೊಂದಿಗೆ ಆಸ್ಪತ್ರೆಗೆ ನಡೆದುಕೊಂಡು ಬಂದಿರುವುದಾಗಿ ಗರ್ಭಿಣಿ ಲಕ್ಷ್ಮಿ ತಿಳಿಸಿದ್ದಾಳೆ.

ABOUT THE AUTHOR

...view details