ಕರ್ನಾಟಕ

karnataka

ETV Bharat / state

ಬಡ್ಡಿ ಕೊಡ್ದಿದ್ರೆ ನಿನ್​ ಹೆಣ ಎತ್ತೇನಿ... ಪೇದೆ ಬೆದರಿಸಿದ್ದಾರೆ ಎನ್ನಲಾದ ವಿಡಿಯೋ ವೈರಲ್​

ಪಡೆದ ಸಾಲಕ್ಕೆ ಬಡ್ಡಿ ಕಟ್ಟದ ವ್ಯಕ್ತಿಗೆ ಪೊಲೀಸ್​ ಪೇದೆಯೊಬ್ಬ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾದ ಘಟನೆ ಗಂಗಾವತಿ ನಗರದಲ್ಲಿ ನಡೆದಿದ್ದು, ಬೆದರಿಕೆ ಹಾಕುತ್ತಿದ್ದಾರೆ ಎನ್ನಲಾಗಿರುವ ವಿಡಿಯೋ ಈಗ ಎಲ್ಲೆಡೆ ವೈರಲ್​ ಆಗಿದೆ.

Constable threatened to a Man in Gangavathi
ಪೇದೆಯಿಂದ ವ್ಯಕ್ತಿಗೆ ಕೊಲೆ ಬೆದರಿಕೆ

By

Published : Dec 27, 2019, 5:22 PM IST

ಗಂಗಾವತಿ: ಪಡೆದ ಸಾಲಕ್ಕೆ ಬಡ್ಡಿ ಕಟ್ಟದ ವ್ಯಕ್ತಿಗೆ ಪೊಲೀಸ್​ ಪೇದೆಯೊಬ್ಬ ಕೊಲೆ ಬೆದರಿಕೆ ಹಾಕಿರುವ ಘಟನೆ ನಗರದಲ್ಲಿ ನಡೆದಿದ್ದು, ಬೆದರಿಕೆ ಹಾಕುತ್ತಿರುವ ವಿಡಿಯೋ ಈಗ ಎಲ್ಲೆಡೆ ವೈರಲ್​ ಆಗಿದ್ದು, ಸದ್ದು ಮಾಡುತ್ತಿದೆ.

ಪೇದೆಯೊಬ್ಬರು ವ್ಯಕ್ತಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾದ ವಿಡಿಯೋ ವೈರಲ್​​​​

ನಗರಠಾಣೆಯ ಪೊಲೀಸ್ ಪೇದೆ ನಬೀ ಎಂಬ ವ್ಯಕ್ತಿಗೆ ಬೆದರಿಸಿದ್ದಾರೆ ಎನ್ನಲಾಗಿದೆ. ಪಡೆದ ಸಾಲಕ್ಕೆ ಬಡ್ಡಿ ​ಕೊಡದಿದ್ದಾಗ ಸಾರ್ವಜನಿಕವಾಗಿ ನಿಂದಿಸಿರುವ ಪೇದೆ ಹಣ ನೀಡದಿದ್ದರೆ ನಿನ್ನ ಹೆಣ ಎತ್ತುತ್ತೇನೆ ಎಂದು ಸಾರ್ವಜನಿಕವಾಗಿ ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಈ ಪ್ರಕರಣ ಎಂಟು ತಿಂಗಳ ಹಿಂದೆ ನಡೆದಿದ್ದು ಎನ್ನಲಾಗಿದ್ದು, ಈಗ ವೈರಲ್ ಆಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಸ್ನೇಹಿತ ಶ್ರೀನಿವಾಸ್ ಎಂಬಾತ ನಬಿಗೆ ಸಾಲ ನೀಡಿದ್ದ. ಶ್ರೀನಿವಾಸನ ಪರವಾಗಿ ಪೇದೆ ಬಡ್ಡಿ ಕೇಳಲು ಹೋಗಿದ್ದರು ಎನ್ನಲಾಗುತ್ತಿದೆ.

ಆದರೆ ಪೇದೆ ಸಾರ್ವಜನಿಕವಾಗಿ ಏರು ಧ್ವನಿಯಲ್ಲಿ ಬೆದರಿಕೆ ಹಾಕುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ತನಿಖೆ ನಡೆಯುತ್ತಿದೆ.

For All Latest Updates

TAGGED:

ABOUT THE AUTHOR

...view details