ಗಂಗಾವತಿ:ಡಾಕ್ಟ್ರೆ ನಿಮ್ಮನ್ನು, ನಿಮ್ಮ ಕುಟುಂಬದ ಸದಸ್ಯರನ್ನು ಸರ್ವ ನಾಶ ಮಾಡ್ತೀನಿ ಹುಷಾರ್ ಎಂದು ವ್ಯಕ್ತಿಯೊಬ್ಬ ಇಲ್ಲಿನ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯ ಇಬ್ಬರು ವೈದ್ಯರಿಗೆ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ವೈದ್ಯರಿಗೆ ಬೆದರಿಕೆ ಹಾಕಿದ ವ್ಯಕ್ತಿಯನ್ನು ನಗರದ ಸೈಯದ್ ಇಸ್ಮಾಯಿಲ್ ಎಂದು ಗುರುತಿಸಲಾಗಿದೆ. ಈ ಸಂಬಂಧ ಆಸ್ಪತ್ರೆಯ ಅರವಳಿಕೆ ತಜ್ಞ ರೇಣುಕಾರಾಧ್ಯ ಹಿರೇಮಠ ಎಂಬುವರು ಇಲ್ಲಿನ ನಗರಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಗರದ ಸೈಯದ್ ಇಸ್ಮಾಯಿಲ್ ಎಂಬ ವ್ಯಕ್ತಿ ತನ್ನ ತಾಯಿ (ಸೋಂಕಿತೆ) ಖಾಜಾಬನಿ ಎಂಬುವವರನ್ನು ಆನೆಗೊಂದಿ ರಸ್ತೆಯಲ್ಲಿನ ಎಂಸಿಎಚ್ ಆಸ್ಪತ್ರೆಗೆ ಮೇ 11ರಂದು ದಾಖಲಿಸಿದ್ದರು. ಆದರೆ ಆರೋಗ್ಯದಲ್ಲಿ ಸುಧಾರಣೆ ಕಾಣದ ಹಿನ್ನೆಲೆ ಆಕೆಯನ್ನು ಮೇ 19ರಂದು ಇಲ್ಲಿನ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೋಂಕಿತ ಮಹಿಳೆ ಸಾವನ್ನಪ್ಪಿದ್ದಳು.