ಗಂಗಾವತಿ:ತಾಲೂಕಿನ ಚಿಕ್ಕಬೆಣಕಲ್ ಗ್ರಾಮ ಪಂಚಾಯಿತಿ ಪಿಡಿಒ ಶೇಖ್ಸಾಬ್, ಗ್ರಾಮದ ನಾಗರಿಕರೊಂದಿಗೆ ಅನುಚಿತವಾಗಿ ವರ್ತನೆ ಮಾಡಿದ್ದಾರೆ ಎಂದು ಆರೋಪಿಸಿ ಪಂಚಾಯಿತಿ ಮುಂದೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಅನುಚಿತ ವರ್ತನೆ ಆರೋಪ: ಪಿಡಿಒ ವಿರುದ್ಧ ಚಿಕ್ಕಬೆಣಕಲ್ ಗ್ರಾಮಸ್ಥರ ಪ್ರತಿಭಟನೆ - ಚಿಕ್ಕಬೆಣಕಲ್ ಗ್ರಾಮಸ್ಥರ ಪ್ರತಿಭಟನೆ
ನಾಗರಿಕರೊಂದಿಗೆ ಅನುಚಿತವಾಗಿ ವರ್ತನೆ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಪಿಡಿಒ ವಿರುದ್ದ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್ ಗ್ರಾಮದಲ್ಲಿ ನಡೆದಿದೆ.
ಉದ್ಯೋಗ ಖಾತ್ರಿಯಲ್ಲಿ ಕೆಲಸ ಕೇಳಲು ಹೋದ ಕಾರ್ಮಿಕರು ಹಾಗೂ ಗ್ರಾಮಸ್ಥರೊಂದಿಗೆ ಪಿಡಿಒ ಸೌಜನ್ಯಪೂರಕವಾಗಿ ವರ್ತಿಸದೇ ಉಡಾಫೆಯಾಗಿ ಪ್ರತಿಕ್ರಿಯಿಸಿದ್ದಾರೆ. ಕೊರೊನಾದಂತಹ ಸಮಯದಲ್ಲಿ ಕೂಲಿ ಕಾರ್ಮಿಕರ ಬೆಂಬಲಕ್ಕೆ ನಿಲ್ಲಬೇಕಾದ ಅಧಿಕಾರಿಗಳು ಉದ್ಧಟತನ ಮೆರೆಯುತ್ತಿದ್ದಾರೆ ಎಂದು ಧರಣಿಕಾರರು ಆರೋಪಿಸಿದರು. ಒಂದು ವರ್ಷಕ್ಕೆ 150 ದಿನ ಕೂಲಿ ಕೆಲಸ ನೀಡಬೇಕು ಎಂದು ಸರ್ಕಾರ ಹೇಳುತ್ತದೆ. ಡಿಸೆಂಬರ್ ವರೆಗೆ ಕನಿಷ್ಠ ನೂರು ದಿನ ಕೆಲಸ ನೀಡಬೇಕು. ಆದರೆ, ಕೂಲಿಕಾರರಿಗೆ ಕೆಲಸ ನೀಡದೇ ಪಿಡಿಒ ವಂಚಿಸುತ್ತಿದ್ದಾರೆ. ಈ ಬಗ್ಗೆ ಕೇಳಿದರೆ ಅಸಂಬದ್ಧವಾಗಿ ವರ್ತಿರ್ಸುತ್ತಿದ್ದಾರೆ ಎಂದು ಗ್ರಾಮದ ಕಾರ್ಮಿಕರು ಆರೋಪಿಸಿದರು.