ಕೊಪ್ಪಳ:ಜಿಲ್ಲೆಯಲ್ಲಿಪ್ರತಿ ಬಾರಿಯೂ ನಾಗರ ಪಂಚಮಿಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿತ್ತು. ಆದರೆ, ಈ ಬಾರಿ ಕೊರೊನಾ ಭೀತಿಯು ಈ ಎಲ್ಲ ಸಂಭ್ರಮಕ್ಕೆ ಬ್ರೇಕ್ ಹಾಕಿದೆ. ಅಲ್ಲದೆ, ಗ್ರಾಮೀಣ ಕ್ರೀಡೆಗಳಿಗೂ ಮಂಕು ಕವಿದಿದೆ.
ನಾಗರ ಪಂಚಮಿ ಹಬ್ಬದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಯುವಕರು ತಮ್ಮದೇ ಆದ ಗ್ರಾಮೀಣ ಕ್ರೀಡೆಗಳಲ್ಲಿ ತೊಡಗುವ ಮೂಲಕ ಹಬ್ಬಕ್ಕೆ ಕ್ರೀಡಾ ಮೆರಗು ನೀಡುತ್ತಾರೆ. ಈ ಹಬ್ಬದಲ್ಲಿ ವಿವಿಧ ರೀತಿಯ ಮೋಜಿನ, ಶಕ್ತಿ-ಯುಕ್ತಿ ಪ್ರದರ್ಶನದಂತಹ ಅಪ್ಪಟ ಗ್ರಾಮೀಣ ಆಟಗಳನ್ನು ಆಡುತ್ತಾರೆ.