ಗಂಗಾವತಿ: ತಾಲೂಕಿನ ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರವಾದ ಅಂಜನಾದ್ರಿ ಪರ್ವತ ಆಂಜನೇಯ ದೇಗುಲದ ದರ್ಶನವನ್ನು ದೇವಸ್ಥಾನದ ಆಡಳಿತ ಮಂಡಳಿ ದಿಢೀರ್ ರದ್ದು ಮಾಡಿದೆ.
ಅಂಜನಾದ್ರಿ ಪರ್ವತದ ಆಂಜನೇಯನ ದರ್ಶನ ದಿಢೀರ್ ರದ್ದು
ಗಂಗಾವತಿಯ ಅಂಜನಾದ್ರಿ ಪರ್ವತ ಆಂಜನೇಯ ದೇಗುಲದ ದರ್ಶನವನ್ನು ದೇವಸ್ಥಾನದ ಆಡಳಿತ ಮಂಡಳಿ ದಿಢೀರ್ ರದ್ದು ಮಾಡಿದೆ.
ಭಾನುವಾರ ತಡರಾತ್ರಿ ದೇಗುಲದ ದರ್ಶನವನ್ನು ರದ್ದು ಮಾಡುವ ನಿರ್ಧಾರ ಕೈಗೊಂಡಿದ್ದು, ಬೆಳಗ್ಗೆ ದೇವರ ದರ್ಶನಕ್ಕೆ ಬಂದಿದ್ದ ನೂರಾರು ಜನರಿಗೆ ಬೆಟ್ಟ ಹತ್ತಲು ಅವಕಾಶ ಇಲ್ಲದ್ದರಿಂದ ವ್ಯವಸ್ಥಾಪನಾ ಕಚೇರಿ ಸಮೀಪ ಇರುವ ಆಂಜನೇಯನ ಮೂರ್ತಿಗೆ ಪೂಜೆ ಸಲ್ಲಿಸಿ ಬಹುತೇಕರು ವಾಪಸಾದರು.
ಇಂದಿನಿಂದ ರಾಜ್ಯದ ಬಹುತೇಕ ದೇಗುಲಗಳಲ್ಲಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿ ಸರ್ಕಾರ ಆದೇಶ ನೀಡಿದ್ದರಿಂದ ಸಹಜವಾಗಿ ಅಂಜನಾದ್ರಿಯಲ್ಲೂ ಆಂಜನೇಯನ ದರ್ಶನ ಸಿಗಬಹುದು ಎಂದು ಭಕ್ತರು ನಿರೀಕ್ಷೆ ಇಟ್ಟುಕೊಂಡಿದ್ದರು. ದೇಗುಲದ ಸಮಿತಿಯೂ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಆದರೆ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳ ಹಿನ್ನೆಲೆ ತಾತ್ಕಾಲಿಕವಾಗಿ ದೇವರ ದರ್ಶನ ರದ್ದು ಮಾಡಲಾಗಿದೆ ಎಂದು ತಿಳಿದು ಬಂದಿದೆ.