ಕರ್ನಾಟಕ

karnataka

ETV Bharat / state

ವಿಪ್ ಬಗ್ಗೆ ಬಹುಶಃ ಅಣ್ಣಂಗೆ ಗೊತ್ತಿಲ್ಲಾಂತ ಕಾಣುತ್ತೆ: ಜೆಡಿಎಸ್ ಸದಸ್ಯ ಜಬ್ಬಾರ್ ಬಿಚ್ಚುಗತ್ತಿ - ನಗರಸಭಾ ಸದಸ್ಯ ಎಂ.ಡಿ. ಉಸ್ಮಾನ್

ಜೆಡಿಎಸ್ ಪಕ್ಷದಿಂದ ಗೆದ್ದು ಪಕ್ಷದ ನಿರ್ಣಯದ ವಿರುದ್ಧ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಕ್ಕೆ ಶಿಸ್ತಕ್ರಮ ಕೈಗೊಳ್ಳುವುದಾಗಿ ಬ್ಲಾಕ್ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ಎಂ.ಡಿ. ಉಸ್ಮಾನ್ ನೀಡಿದ್ದ ಹೇಳಿಕೆಗೆ ಜಬ್ಬಾರ್ ಪ್ರತಿಕ್ರಿಯೆ ನೀಡಿದ್ದಾರೆ.

ನಗರಸಭೆಯ ಐದನೇ ವಾರ್ಡ್​ನ ಜೆಡಿಎಸ್ ಸದಸ್ಯ ಜಬ್ಬಾರ್ ಬಿಚ್ಚುಗತ್ತಿ
ನಗರಸಭೆಯ ಐದನೇ ವಾರ್ಡ್​ನ ಜೆಡಿಎಸ್ ಸದಸ್ಯ ಜಬ್ಬಾರ್ ಬಿಚ್ಚುಗತ್ತಿ

By

Published : Nov 4, 2020, 9:51 PM IST

ಗಂಗಾವತಿ:ರಾಜಕೀಯ ಪಕ್ಷಗಳು ತಮ್ಮ ಸದಸ್ಯರಿಗೆ ವಿಪ್ ಯಾವಾಗ ಜಾರಿ ಮಾಡುತ್ತಾರೆ ಎಂಬ ವಿಷಯ ಬಹುಶಃ ನನ್ನ ಸಹೋದರ ಎಂ.ಡಿ. ಉಸ್ಮಾನ ಅವರಿಗೆ ಗೊತ್ತಿಲ್ಲ ಅಂತ ಕಾಣುತ್ತೆ ಎಂದು ನಗರಸಭೆಯ ಐದನೇ ವಾರ್ಡ್​ನ ಜೆಡಿಎಸ್ ಸದಸ್ಯ ಜಬ್ಬಾರ್ ಬಿಚ್ಚುಗತ್ತಿ ಹೇಳಿದ್ದಾರೆ.

ಜೆಡಿಎಸ್ ಪಕ್ಷದಿಂದ ಗೆದ್ದು ಪಕ್ಷದ ನಿರ್ಣಯದ ವಿರುದ್ಧ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಕ್ಕೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಬ್ಲಾಕ್ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ಎಂ.ಡಿ. ಉಸ್ಮಾನ್ ನೀಡಿದ್ದ ಹೇಳಿಕೆಗೆ ಜಬ್ಬಾರ್ ಪ್ರತಿಕ್ರಿಯೆ ನೀಡಿದ್ದಾರೆ. ಗಂಗಾವತಿ ನಗರಸಭೆಗೆ ಜೆಡಿಎಸ್​ನಿಂದ ಗೆದ್ದಿದ್ದೇ ಇಬ್ಬರು. ಐದು ಮತ್ತು ಆರನೇ ವಾರ್ಡ್​ನಿಂದ ಅದೂ ಅಣ್ಣ (ಉಸ್ಮಾನ್) ಮತ್ತು ತಮ್ಮ (ಜಬ್ಬಾರ್) ನಾನು. ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಕ್ಕೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ನಗರಸಭೆಯ ಐದನೇ ವಾರ್ಡ್​ನ ಜೆಡಿಎಸ್ ಸದಸ್ಯ ಜಬ್ಬಾರ್ ಬಿಚ್ಚುಗತ್ತಿ

ಆದರೆ ವಿಪ್ ಜಾರಿ ಮಾಡಲು ಕನಿಷ್ಠ ಐದರಿಂದ ಆರು ಸದಸ್ಯರು ಇರಬೇಕು. ಆದರೆ ಇರೋದೆ ನಾವು ಇಬ್ಬರು. ಹೀಗಾಗಿ ಅದು ಅನ್ವಯಿಸುವುದಿಲ್ಲ. ಇನ್ನು ಪಕ್ಷದಿಂದ ಅದೂ ಮಾಡ್ತಿವಿ, ಇದು ಮಾಡ್ತಿವಿ ಅಂತಾ ಬ್ಲಾಕ್ ಅಧ್ಯಕ್ಷನ ಮಾತಿಗೆ ತಲೆ ಕೆಡಿಸಿಕೊಳ್ಳಲಾರೆ. ಚುನಾವಣೆ ಸೋತ ಕಾವಿನಲ್ಲಿದ್ದ ಸಂದರ್ಭದಲ್ಲಿ ಉಸ್ಮಾನ್ ಮಾತಿಗೆ ಬಿದ್ದು ಆ ಹೇಳಿಕೆ ನೀಡಿದ್ದಾರೆ. ರಾಜಕೀಯ ಏನೇ ಇದ್ದರೂ ಅದು ಬೇರೆ ಆಯಾಮ. ಅದಕ್ಕೂ ಮೊದಲು ನಾವು ಅಣ್ತಾಮಾಸ್ ಇಬ್ಬರೂ ಒಂದೆ ಸಂಬಂಧಿಗಳು ಎಂದರು.

ABOUT THE AUTHOR

...view details