ಗಂಗಾವತಿ(ಕೊಪ್ಪಳ):ಹೊಲಗದ್ದೆಗಳಲ್ಲಿ ಕೆಲಸ ಮಾಡುವ ಕೃಷಿ ಕೂಲಿಕಾರರಿಗೆ, ವಲಸೆ ಬಂದ ಕುರಿಗಾಹಿಗಳಿಗೆ ಸ್ಥಳಕ್ಕೆ ತೆರಳಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್ ಅವರು ಕೊರೊನಾ ಜಾಗೃತಿ ಮೂಡಿಸುತ್ತಿದ್ದಾರೆ.
ಹೊಲ-ಗದ್ದೆಗಳಿಗೆ ತೆರಳಿ ಕೃಷಿ ಕೂಲಿಕಾರರಿಗೆ, ಕುರಿಗಾಹಿಗಳಿಗೆ ಕೊರೊನಾ ಜಾಗೃತಿ..
ಬೆಳ್ಳಂಬೆಳಗ್ಗೆ ಹೊಲಗದ್ದೆಗಳಿಗೆ ಭೇಟಿ ನೀಡುತ್ತಿರುವ ಅಧಿಕಾರಿ, ಅಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿರುವ ಅನಕ್ಷರಸ್ಥ ಮಹಿಳೆಯರಿಗೆ ಕೊರೊನಾ ಕಾಯಿಲೆಯ ಬಗ್ಗೆ ಮಾಹಿತಿ ಕೊಟ್ಟು ಕೆಲಸ ಮಾಡುವ ಸಂದರ್ಭದಲ್ಲಿ ನಿರ್ಧಿಷ್ಟ ಅಂತರ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡುತ್ತಿದ್ದಾರೆ.
ಹೊಲ-ಗದ್ದೆಗಳಿಗೆ ತೆರಳಿ ಕೃಷಿ ಕೂಲಿಕಾರರಿಗೆ, ಕುರಿಗಾಹಿಗಳಿ ಕೊರೊನಾ ಜಾಗೃತಿ
ಬೆಳ್ಳಂಬೆಳಗ್ಗೆ ಹೊಲಗದ್ದೆಗಳಿಗೆ ಭೇಟಿ ನೀಡುತ್ತಿರುವ ಅಧಿಕಾರಿ, ಅಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿರುವ ಅನಕ್ಷರಸ್ಥ ಮಹಿಳೆಯರಿಗೆ ಕೊರೊನಾ ಕಾಯಿಲೆಯ ಬಗ್ಗೆ ಮಾಹಿತಿ ಕೊಟ್ಟು ಕೆಲಸ ಮಾಡುವ ಸಂದರ್ಭದಲ್ಲಿ ನಿರ್ಧಿಷ್ಟ ಅಂತರ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡುತ್ತಿದ್ದಾರೆ.
ಅಲ್ಲದೇ ಬೆಳಗಾವಿ ಜಿಲ್ಲೆಯಿಂದ ವಲಸೆ ಬಂದ ಕುರಿಗಾಹಿಗಳ ತಂಡದ ಸದಸ್ಯರಿಗೆ ಸ್ವಚ್ಛತೆಯ ಬಗ್ಗೆ ತಿಳಿಹೇಳಿ, ದಿನಕ್ಕೆ ನಾಲ್ಕಾರು ಬಾರಿ ಸೋಪಿನಿಂದ ಕೈ ತೊಳೆಯಬೇಕು. ದಿನಕ್ಕೆ ಎರಡು ಬಾರಿ ಸಮೀಪದ ಕಾಲುವೆ, ಹಳ್ಳ-ಕೊಳ್ಳಗಳಲ್ಲಿ ಸ್ನಾನ ಮಾಡಿ ಎಂದು ತಿಳಿಸಿದರು.