ಕರ್ನಾಟಕ

karnataka

ETV Bharat / state

ಗಂಗಾವತಿ : ನಿಧಿಗಳ್ಳರಿಂದ ದೇವಘಾಟದ ಪ್ರಾಚೀನ ದೇಗುಲ ಧ್ವಂಸ - ಗಂಗಾವತಿಯ ದೇವಘಾಟದ ಪ್ರಾಚೀನ ದೇಗುಲ ಧ್ವಂಸ

ಶುಕ್ರವಾರ ಸಂಜೆ ಈ ಘಟನೆ ಬೆಳಕಿಗೆ ಬಂದಿದ್ದು, ದೇಗುಲದ ಅಭಿವೃದ್ಧಿ ಸಮಿತಿ ಅಧ್ಯಕ್ಷ ವೀರೇಶ್ ಕೊಳ್ಳಾ ಎಂಬುವರು ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೇಗುಲವನ್ನು ವಿಜಯನಗರದ ಅರಸರ ಕಾಲದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ..

ancient-temple-wreck-in-devaghat-by-treasure-hunters
ದೇವಘಾಟದ ಪ್ರಾಚೀನ ದೇಗುಲ ಧ್ವಂಸ

By

Published : Dec 31, 2021, 7:34 PM IST

ಗಂಗಾವತಿ :ನಿಧಿ ಆಸೆಗಾಗಿ ದುಷ್ಕರ್ಮಿಗಳು ನಗರದ ಹೊರವಲಯದಲ್ಲಿರುವ ದೇವಘಾಟದ ಪ್ರಾಚೀನ ದೇವಾಲಯದಲ್ಲಿನ ದ್ವಾರ ಬಾಗಿಲು ಅಗೆದು ಧ್ವಂಸ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ದೇವಘಾಟದ ಪ್ರಾಚೀನ ದೇಗುಲ ಧ್ವಂಸ

ದೇವಘಾಟದ ಅಮೃತೇಶ್ವರ ದೇವಾಲಯದ ಪಕ್ಕ ಇರುವ ಗಣೇಶ ದೇವಾಲಯದ ಹೆಬ್ಬಾಗಿಲಿನ ಮುಂದೆ ಅಳವಾದ ಗುಂಡಿ ತೋಡಿ ನಿಧಿಗಾಗಿ ಶೋಧಿಸಿದ್ದಾರೆ. ಜನ ಸಂಚಾರ ವಿರಳ ಇರುವ ಈ ದೇಗುಲದಲ್ಲಿ ಈ ಘಟನೆ ಗುರುವಾರ ರಾತ್ರಿ ನಡೆದಿರುವ ಶಂಕೆಯಿದೆ.

ಶುಕ್ರವಾರ ಸಂಜೆ ಈ ಘಟನೆ ಬೆಳಕಿಗೆ ಬಂದಿದ್ದು, ದೇಗುಲದ ಅಭಿವೃದ್ಧಿ ಸಮಿತಿ ಅಧ್ಯಕ್ಷ ವೀರೇಶ್ ಕೊಳ್ಳಾ ಎಂಬುವರು ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೇಗುಲವನ್ನು ವಿಜಯನಗರದ ಅರಸರ ಕಾಲದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ.

ದೇವಘಾಟದ ಪ್ರಾಚೀನ ದೇಗುಲ ಧ್ವಂಸ

ತುಂಗಭದ್ರಾ ನದಿ ಸಮೀಪದಲ್ಲಿ ಇರುವ ಈ ಸ್ಥಳವನ್ನು ದೇವಘಾಟ ಎನ್ನಲಾಗುತ್ತಿದೆ. ಇದು ಪುರಾಣಗಳಲ್ಲಿ ಉಲ್ಲೇಖವಾಗಿದೆ. ದೇವತೆಗಳ ಸ್ನಾನದ ಘಟ್ಟವಾಗಿತ್ತು ಎಂದು ನಂಬಲಾಗುತ್ತಿದೆ. ರಾಮಾಯಣದ ಕಾಲದಲ್ಲಿನ ಕಿಷ್ಕಿಂಧೆ, ಪಂಪಾಸರೋವರದ ಸಾಲಿನಲ್ಲಿ ಈ ದೇವಘಾಟದ ಉಲ್ಲೇಖವಿದೆ ಎಂದು ಹೇಳಲಾಗಿದೆ.

ಓದಿ:2021 Rewind : ರಾಜ್ಯ ಹೈಕೋರ್ಟ್​ನೊಳಗೆ 2021ರಲ್ಲಾದ ಮಹತ್ವದ ಬದಲಾವಣೆಗಳು

ABOUT THE AUTHOR

...view details