ಗಂಗಾವತಿ: ಹುಬ್ಬಳಿಯಿಂದ ರಾಯಚೂರಿಗೆ ಹೋಗುವಾಗ ದಾರಿ ತಪ್ಪಿ ನಗರಕ್ಕೆ ಬಂದಿದ್ದ, ಉತ್ತರ ಭಾರತದ 27 ಜನ ವಲಸೆ ಕಾರ್ಮಿಕರಿಗೆ ಯುವಕನೊಬ್ಬ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾನೆ.
ಮಾನವೀಯತೆಗೆ ಸಲಾಂ: ವಲಸೆ ಕಾರ್ಮಿಕರಿಗೆ ಊಟ ವಸತಿ, ಬಸ್ ಟಿಕೆಟ್ಗೆ ಹಣ ನೀಡಿದ ಯುವಕ
ಗಂಗಾವತಿಗೆ ಬಂದು ಊಟ ಹಾಗೂ ಉಪಹಾರಕ್ಕೂ ಪರದಾಡುತ್ತಿದ್ದ ಉತ್ತರ ಭಾರತದ 27 ಜನ ವಲಸೆ ಕಾರ್ಮಿಕರಿಗೆ, ಯುವಕನೊಬ್ಬ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾನೆ..
ವಲಸೆ ಕಾರ್ಮಿಕರಿಗೆ ಊಟ ವಸತಿ, ಬಸ್ಟಿಕೆಟ್ಗೆ ಹಣ ನೀಡಿದ ಯುವಕ
ಊಟ ಹಾಗೂ ಉಪಹಾರಕ್ಕೂ ಪರದಾಡುತ್ತಿದ್ದ ಅವರಿಗೆ ನಗರದ ಯುವ ಉದ್ಯಮಿ ದೀಪಕ್ ಬಾಂಠಿಯಾ, ಇಡೀ ದಿನ ಉಪಹಾರ, ಚಹಾ, ಬಾಳೆಹಣ್ಣು, ಬಿಸ್ಕತ್ ,ಮಧ್ಯಾಹ್ನ ಊಟ, ಸಂಜೆ ಲಘು ತಿಂಡಿ ಹಾಗೂ ರಾತ್ರಿ ಊಟದ ವ್ಯವಸ್ಥೆ ಮಾಡಿದ್ದಾರೆ. ವಿಶ್ರಾಂತಿಗೆ ಸುಸಜ್ಜಿತ ಪಾಡಗುತ್ತಿಗೆ ಗಾರ್ಡನ್ನಲ್ಲಿ ತಂಗಲು ವ್ಯವಸ್ಥೆ ಮಾಡಿದ್ದಾರೆ.
ರಾತ್ರಿ ಬೆಂಗಳೂರಿಗೆ ತೆರಳಲು ವಾಹನಕ್ಕೂ ಹಣ ಇಲ್ಲವಾದ್ದರಿಂದ, ಕಾರ್ಮಿಕರಿಗೆ ತಲಾ 250 ರೂಪಾಯಿಯಂತೆ ಟಿಕೆಟ್ ದರ ನೀಡಿ ಮಾನವೀಯತೆ ತೋರಿದ್ದಾರೆ.
TAGGED:
corona updates in karnataka