ಕರ್ನಾಟಕ

karnataka

ETV Bharat / state

ಅಪ್ಪನಿಂದಲೇ ತಾಯಿಯಾದ ಮಗಳು:  ಹಸುಗೂಸನ್ನು ಅನಾಥವಾಗಿಸಿದ ಹೆತ್ತಮ್ಮ!

ತಾನು ಜನ್ಮ ಕೊಟ್ಟ ಮಗಳ ಮೇಲೆ ಕೀಚಕ ತಂದೆಯೊಬ್ಬ ನಿರಂತರ ಅತ್ಯಾಚಾರ ಎಸೆಗಿದ್ದನು. ಈಗ ಆಕೆ ಮಗುವಿಗೆ ಜನ್ಮ ನೀಡಿದ್ದು, ಆ ಹಸುಳೆಯನ್ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಿದ್ದಾರೆ.

mother rejected his child, mother rejected his child in Gangavathi, mother rejected his child news, ಮಗುವನ್ನು ತಿರಸ್ಕರಿಸಿದ ತಾಯಿ, ಗಂಗಾವತಿಯಲ್ಲಿ ಮಗುವನ್ನು ತಿರಸ್ಕರಿಸಿದ ತಾಯಿ, ಗಂಗಾವತಿಯಲ್ಲಿ ಮಗುವನ್ನು ತಿರಸ್ಕರಿಸಿದ ತಾಯಿ ಸುದ್ದಿ,
ಅಪ್ಪನಿಂದಲೇ ತಾಯಿಯಾದ ಮಗಳು

By

Published : Jun 24, 2020, 11:14 AM IST

Updated : Jun 24, 2020, 11:53 AM IST

ಗಂಗಾವತಿ (ಕೊಪ್ಪಳ):ತಂದೆಯಿಂದಲೇ ಹುಟ್ಟಿದ ಮಗುವನ್ನು ಮಗಳು ಮತ್ತು ಆಕೆಯ ಕುಟುಂಬಸ್ಥರು ಸ್ವೀಕರಿಸಲು ನಿರಾಕರಿಸಿದ್ದು, ಈಗ ಆ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಿಗೆ ಹಸ್ತಾಂತರಿಸಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದಿದೆ.

ಕೀಚಕ ತಂದೆಯಿಂದ ತಾಯಿಯಾದ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಮಗುವನ್ನು ಸಾಕಿ ಬೆಳೆಸುವಲ್ಲಿ ಮಗುವಿನ ತಾಯಿ ಮತ್ತು ಅಜ್ಜಿ ನಿರಾಕರಿಸಿದ್ದು, ಆ ಕಂದನನ್ನು ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ.

ಇನ್ನು ಮಗುವನ್ನು ಕೊಪ್ಪಳದ ಬಾಲ ಮಂದಿರದಲ್ಲಿ ಇರಿಸಿ ಲಾಲನೆ - ಪಾಲನೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನನ್ನ ಪತಿಯ ಅತ್ಯಾಚಾರದಿಂದಾಗಿಯೇ ನನ್ನ ಮಗಳು ಗರ್ಭವತಿಯಾಗಿದ್ದು, ಸಮಾಜ ಮತ್ತು ಸಂಬಂಧಕ್ಕೆ ಹೆದರಿ ಈ ನಿರ್ಧಾರ ಮಾಡಲಾಗಿದೆ ಎಂದು ಬಾಣಂತಿಯ ತಾಯಿ ತಿಳಿಸಿದ್ದಾರೆ.

Last Updated : Jun 24, 2020, 11:53 AM IST

ABOUT THE AUTHOR

...view details