ಕೋಲಾರ:ನಾಳೆ ಭಾನುವಾರದ ಲಾಕ್‌ಡೌನ್ ಆದೇಶ ರಾಜ್ಯದೆಲ್ಲೆಡೆ ಜಾರಿ ಇರಲಿದೆ. ಆದರೆ, ಮದ್ಯದಂಗಡಿಗಳು ಮುಚ್ಚುವುದರ ಕುರಿತು ಸರ್ಕಾರದಿಂದ ಸ್ಪಷ್ಟ ಮಾಹಿತಿ ಬಂದಿಲ್ಲ. ಆದೇಶ ಬಂದ ನಂತರ ತಿಳಿಸಲಾಗುವುದು ಎಂದು ಅಬಕಾರಿ ಸಚಿವ ಹೆಚ್ ನಾಗೇಶ್ ಹೇಳಿದ್ರು.
ಮದ್ಯದಂಗಡಿ ಬಂದ್ ಕುರಿತು ಸ್ಪಷ್ಟ ಮಾಹಿತಿಯಿಲ್ಲ.. ಅಬಕಾರಿ ಸಚಿವ ಹೆಚ್ ನಾಗೇಶ್ - Sunday lockdown order
ಮೀನು, ಮೊಟ್ಟೆ ಸೇರಿ ಮಾಂಸದಂಗಡಿಗಳು ಎಂದಿನಂತೆ ತೆರೆಯಲಿವೆ. ಸಂಜೆ ಮದ್ಯದಂಗಡಿಗಳು ತೆರೆಯುವ ಕುರಿತು ಸ್ಪಷ್ಟ ಮಾಹಿತಿ ಸಿಗಲಿದೆ..
ಇಂದು ಜಿಲ್ಲೆಯ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಳೆ ಅಗತ್ಯ ವಸ್ತಗಳನ್ನು ಹೊರತುಪಡಿಸಿ ಉಳಿದೆಲ್ಲವೂ ಬಂದ್ ಆಗಲಿವೆ. ಆದರೆ, ಮದ್ಯದಂಗಡಿಗಳನ್ನ ಬಂದ್ ಮಾಡುವುದರ ಕುರಿತು ಸರ್ಕಾರದಿಂದ ಇನ್ನೂ ಯಾವುದೇ ಆದೇಶ ಬಂದಿಲ್ಲ ಎಂದರು.
ಇಂದು ಸಂಜೆ 8ಗಂಟೆಯಿಂದ ನಾಳೆ ಇಡೀ ದಿನ ಲಾಕ್‌ಡೌನ್ ಆಗಲಿದ್ದು, ಬಸ್,ಆಟೋ ಸಂಚಾರ ಹಾಗೂ ಅಂಗಡಿಗಳು ಬಂದ್ ಆಗಲಿವೆ ಎಂದು ತಿಳಿಸಿದ್ರು. ಮೀನು, ಮೊಟ್ಟೆ ಸೇರಿ ಮಾಂಸದಂಗಡಿಗಳು ಎಂದಿನಂತೆ ತೆರೆಯಲಿವೆ. ಸಂಜೆ ಮದ್ಯದಂಗಡಿಗಳು ತೆರೆಯುವ ಕುರಿತು ಸ್ಪಷ್ಟ ಮಾಹಿತಿ ಸಿಗಲಿದೆ ಎಂದು ಹೇಳಿದ್ರು. ಈಗಾಗಲೇ ಮಹಾಮಾರಿ ಕೊರೊನಾದಿಂದಾಗಿ ರೈತರಿಗೆ ಸಾಕಷ್ಟು ನಷ್ಟವಾಗಿರುವ ಪರಿಣಾಮ ನಾಳೆಯೂ ಕೋಲಾರದ ಎಪಿಎಂಸಿ ಮಾರುಕಟ್ಟೆ ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದರು.