ಕೋಲಾರ: ರೈತ ತಾನೇ ಬೆಳೆದ ಕೊತ್ತಂಬರಿ ಸೊಪ್ಪಿನ ಬೆಳೆಯನ್ನು ತನ್ನ ಕೈಯಾರೆ ಉಳುಮೆ ಮಾಡಿರುವ ಘಟನೆ ತಾಲೂಕಿನ ತೊಟ್ಟಿ ಗ್ರಾಮದಲ್ಲಿ ನಡೆದಿದೆ. ಪ್ರತೀಕೂಲ ಹವಾಮಾನ ಬದಲಾವಣೆಯಿಂದ ಕೊತ್ತಂಬರಿ ಸೊಪ್ಪು ಬೆಳೆಗೆ ಬೆಲೆ ಇಲ್ಲದಂತಾಗಿದೆ ಎಂದು ರೈತ ಕಣ್ಣೀರಿಟ್ಟಿದ್ದಾರೆ.
ಪ್ರತೀಕೂಲ ಹವಾಮಾನ - ಕೊತ್ತಂಬರಿ ಬೆಳೆ ಕೈಯಾರೆ ನಾಶ ಮಾಡಿದ ರೈತ - ಈಟಿವಿ ಭಾರತ ಕನ್ನಡ
ರೈತ ತಾನೇ ಬೆಳೆದ ಕೊತ್ತಂಬರಿ ಸೊಪ್ಪನ್ನು ತನ್ನ ಕೈಯಾರೆ ಉಳುಮೆ ಮಾಡಿ ನಾಶ ಮಾಡಿರುವ ಘಟನೆ ವರದಿಯಾಗಿದೆ.
ಪ್ರಭಾಕರ್ ಎಂಬವರು ಸುಮಾರು ಒಂದು ಎಕರೆ ಪ್ರದೇಶದಲ್ಲಿ ಎಪ್ಪತ್ತು ಸಾವಿರದಷ್ಟು ಸಾಲ ಮಾಡಿ ಕೊತ್ತಂಬರಿ ಸೊಪ್ಪು ಬೆಳೆದಿದ್ದರು. ಇದೀಗ ಟ್ರಾಕ್ಟರ್ ಮೂಲಕ ಉಳುಮೆ ಮಾಡಿ, ಬೆಳೆದಿದ್ದ ಕೊತ್ತಂಬರಿ ಸೊಪ್ಪುನ್ನು ತನ್ನ ಕೈಯಾರೆ ನಾಶ ಮಾಡಿದ್ದಾರೆ. ತಾವು ಬೆಳೆದ ಕೊತ್ತಂಬರಿ ಸೊಪ್ಪಿಗೆ ಉತ್ತಮ ಬೆಲೆ ಸಿಕ್ಕಿದ್ದಲ್ಲಿ 2ರಿಂದ 3ಲಕ್ಷ ಹಣವು ಸಿಗುತ್ತಿತ್ತು. ಆದರೆ, ಮಾರುಕಟ್ಟೆಯಲ್ಲಿ ಸೊಪ್ಪನ್ನು ಕೇಳುವವರಿಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಹವಾಮಾನಕ್ಕೆ ತಕ್ಕಂತೆ ಬೆಳೆ.. ಮಿಶ್ರ ಬೇಸಾಯದಲ್ಲಿ ಲಕ್ಷಾಂತರ ರೂಪಾಯಿ ಲಾಭ ಗಳಿಸುತ್ತಿರುವ ಕಲಬುರಗಿ ರೈತ