ಕೋಲಾರ : ನಾಳೆ ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಸಹೋದರನಿಗೆ ಗೆಲುವು ಸಿಗಲೆಂದು ಪ್ರಜ್ಜಲ್ ರೇವಣ್ಣ ಸಹೋದರ ಸೂರಜ್ ರೇವಣ್ಣ ಕೋಲಾರದಲ್ಲಿ ವಿಶೇಷ ಪೂಜೆ ಮತ್ತು ಹೋಮ ನಡೆಸಿದ್ದಾರೆ.
ಅಣ್ಣನ ಗೆಲುವಿಗಾಗಿ ಕುರುಡುಮಲೆ ವಿನಾಯಕನ ಮೊರೆ ಹೋದ ಸೂರಜ್ ರೇವಣ್ಣ - undefined
ನಾಳೆ ಲೋಕಸಭಾ ಚುನಾವಣೆ ಫಲಿತಾಂಶ ಹೊರಬೀಳಲಿದ್ದು, ಪ್ರಜ್ವಲ್ ರೇವಣ್ಣ ಗೆಲುವಿಗಾಗಿ ತಮ್ಮ ಸೂರಜ್ ರೇವಣ್ಣ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಕೋಲಾರ ಜಿಲ್ಲೆ ಮುಳಬಾಗಲು ತಾಲೂಕಿನ ಇತಿಹಾಸ ಪ್ರಸಿದ್ದ ಕುರುಡುಮಲೆ ವಿನಾಯಕ ದೇವಾಲಯದಲ್ಲಿ ಹಾಸನ ಲೋಕಸಭಾ ಕ್ಷೇತದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಗೆಲುವಿಗಾಗಿ ಅವರ ಸಹೋದರ ಇಂದು ಬೆಳಗ್ಗೆ ದೇವಾಲಯದಲ್ಲಿ ವಿಶೇಷ ಪೂಜೆ ಮತ್ತು ಹೋಮ ನಡೆಸಿದ್ದಾರೆ.
ಇಂದು ಮುಂಜಾನೆಯಿಂದ ದೇವಾಲಯದಲ್ಲಿ ಹೋಮ ಹಾಗೂ ವಿಶೇಷ ಪೂಜೆಯಲ್ಲಿ ಪ್ರಜ್ವಲ್ ರೇವಣ್ಣ ಸಹೋದರ ಸೂರಜ್ ಭಾಗಿಯಾಗಿದ್ದರು. ಇನ್ನು ದೇವಾಲಯದಲ್ಲಿ ಅರ್ಚಕರಿಂದ ವಿಜಯ ಹೋಮ ಹಾಗೂ ವಿಶೇಷ ಪೂಜೆಯನ್ನು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಾಡಿಸಿದ್ದಾರೆ. ಪೂಜೆ ಕಾರ್ಯಕ್ರಮದಲ್ಲಿ ಜೆಡಿಎಸ್‌ನ ಕೆಲ ಮುಖಂಡರು ಭಾಗವಹಿಸಿದ್ದಾರೆ.