ಕೋಲಾರ : ರಾಜ್ಯದಲ್ಲಿ ಉತ್ತಮವಾಗಿ ಮಳೆಯಾಗಲಿ ಎಂದು ಸರ್ಕಾರದ ಆದೇಶದಂತೆ ಬರದ ನಾಡು ಕೋಲಾರ ಜಿಲ್ಲೆಯಲ್ಲೂ ಮುಜರಾಯಿ ಇಲಾಖೆಗೆ ಸೇರಿದ ಹಲವು ದೇವಾಲಯಗಳಲ್ಲಿ ಪೂಜೆ, ಹೋಮ, ಹವನ ನಡೆಸಲಾಗುತ್ತಿದೆ.
ಉತ್ತಮ ಮಳೆಗಾಗಿ ಸರ್ಕಾರದಿಂದ ಪೂಜೆಗೆ ಆದೇಶ... ದೇಗುಲಗಳಲ್ಲಿ ಹೋಮ, ಹವನ - Kannada news
ರಾಜ್ಯದಲ್ಲಿ ಬರ ಪರಿಹಾರಕ್ಕಾಗಿ ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿನ ಪ್ರಸಿದ್ಧ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸಲಾಯಿತು.
ಉತ್ತಮ ಮಳೆಗಾಗಿ ದೇಗುಲಗಳಲ್ಲಿ ಹೋಮ, ಹವನ
ರಾಜ್ಯದಲ್ಲಿ ಬರ ಪರಿಹಾರಕ್ಕಾಗಿ ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿನ ಪ್ರಸಿದ್ಧ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸಲಾಯಿತು, ನಗರದ ಶಕ್ತಿ ದೇವತೆ ಕೋಲಾರಮ್ಮ ದೇವಸ್ಥಾನ ಸೇರಿದಂತೆ ಸೋಮೇಶ್ವರ ದೇಗುಲ, ಚಿಕ್ಕ ತಿರುಪತಿ ಪ್ರಸನ್ನ ವೆಂಕಟರಮಣಸ್ವಾಮಿ ದೇಗುಲ, ಕೆಜಿಎಫ್ ನ ಬಂಗಾರ ತಿರುಪತಿ ವೆಂಕಟರಮಣಸ್ವಾಮಿ ದೇವಸ್ಥಾನಗಳಲ್ಲಿ ಉತ್ತಮ ಮಳೆ, ಬೆಳೆಯಾಗಲಿ ಎಂದು ಮುಜುರಾಯಿ ಇಲಾಖೆ ಪೂಜೆ, ಅಭಿಷೇಕ, ಹೋಮ ಹವನ, ಕುಂಕುಮಾರ್ಚನೆ ಮಾಡಿದರು.