ಕೋಲಾರ: ಒಂದು ಕಾಲದಲ್ಲಿ ಚಿನ್ನದ ಗಣಿ ಪ್ರದೇಶದಲ್ಲಿ ಸದ್ದು ಮಾಡಿದ್ದ ರೌಡಿ ತಂಗಂ ಸೋದರರಾದ ಜೋಸೆಫ್ ಮತ್ತು ಪಲ್ಲರಾಜು, ಅಕ್ರಮ ಗಾಂಜಾ ವಹಿವಾಟು ಮಾಡಿ ಇತ್ತೀಚೆಗೆ ಸಿಕ್ಕಿಬಿದ್ದಿದ್ದಾರೆ. ಆದ್ದರಿಂದ ಅವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿ ಕೆ.ಜಿ.ಎಫ್ ಪೊಲೀಸ್ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಕರನ್ ಕ್ರಮಕ್ಕೆ ಶಿಫಾರಸ್ಸು ಮಾಡಿದ್ದಾರೆ.
ಈ ಮೊದಲು 1990ರ ದಶಕದಲ್ಲಿ ತಂಗಂ ಸೇರಿದಂತೆ ಅವರ ಕುಟುಂಬದವರ ಅಟ್ಟಹಾಸ ಎಲ್ಲೆ ಮೀರಿತ್ತು. ಆ ವೇಳೆ ಪೊಲೀಸರು ತಂಗಂ, ಸೆಲ್ವಂರನ್ನು ಎನ್ಕೌಂಟರ್ ಮಾಡಿ, ಇಡೀ ಕುಟುಂಬದರ ಹೆಡೆ ಮುರಿ ಕಟ್ಟಿದ್ದರು. ಇದಾದ ನಂತರ ತಂಗಂ ಕುಟುಂಬ ಸೈಲೆಂಟಾಗಿತ್ತು. ಆದ್ರೆ ಇತ್ತೀಚೆಗೆ ಕಳೆದ ಒಂದು ದಶಕಗಳಿಂದ ಮತ್ತೆ ಅನೈತಿಕ ಚಟುವಟಿಕೆಗಳನ್ನು ಶುರುಮಾಡಿಕೊಂಡಿದ್ರು. ಕಳ್ಳತನ, ಸುಲಿಗೆ, ಡಕಾಯಿತಿ, ಕೊಲೆ ಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ರು. ಈ ಸಂಬಂಧ ಅವರ ಮೇಲೆ ರೌಡಿಶೀಟ್ ಓಪನ್ ಮಾಡಿ ಎಚ್ಚರಿಕೆ ನೀಡಲಾಗಿತ್ತು.