ಕೋಲಾರ:ಅನರ್ಹ ಶಾಸಕರ ತೀರ್ಪು ಸೋಮವಾರ ಬಂದ ನಂತರ ಚುನಾವಣೆಯ ಚಿತ್ರಣವೇ ಬದಲಾಗುತ್ತೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿಕೆ ನೀಡಿದ್ದಾರೆ.
ಪಕ್ಷದ ಅಧ್ಯಕ್ಷರೇ ರಾಜೀನಾಮೆ ಕೊಟ್ಟಿದ್ದಾರೆ.. ಕಾಂಗ್ರೆಸ್ಗೆ ದಿಕ್ಕು ದೆಸೆಯಿಲ್ಲ.. ಸಚಿವ ಆರ್.ಅಶೋಕ್ ಲೇವಡಿ - ಸಚಿವ ಆರ್ ಅಶೋಕ್
ಕಾಂಗ್ರೆಸ್ ಪಕ್ಷದ ಅಧ್ಯಕ್ಷರೇ ರಾಜೀನಾಮೆ ಕೊಟ್ಟಿರುವ ಕಾರಣ ಆ ಪಕ್ಷಕ್ಕೆ ದಿಕ್ಕು ದೆಸೆಯಿಲ್ಲ ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಪಚುನಾವಣೆ ದಿನಾಂಕ ನಿಗದಿಯಾಗಿದೆ. ಚುನಾವಣೆಯಲ್ಲಿ 15ಕ್ಕೆ 15ಸ್ಥಾನ ಬಿಜೆಪಿಯೇ ಗೆಲ್ಲಲಿದೆ. ಸೋಮವಾರದ ನಂತರ ರಾಜಕೀಯದ ಚಿತ್ರಣ ಬದಲಾಗುತ್ತದೆ ಎಂದರು.ನಿನ್ನೆ ಹೊಸಕೋಟೆಯಲ್ಲಿ ನಡೆದ ಸಮಾವೇಶಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ನಿನ್ನೆ ಸಭೆಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರೇ ಬಂದಿಲ್ಲ. ಇನ್ನು, ಸಿದ್ದರಾಮಯ್ಯ ಅವರು ರಣಕಹಳೆ ಊದುವುದು ಎಲ್ಲಿ ಎಂದು ವ್ಯಂಗ್ಯವಾಡಿದ್ರು. ಜೊತೆಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿರುವುದರಿಂದ ರಣ ಕಣವೂ ಇಲ್ಲ, ಕಹಳೆಯೂ ಇಲ್ಲ, ಕಹಳೆ ಅಲ್ಲದೆ ಸಣ್ಣ ಪೀಪಿ ಊದುವುದಕ್ಕೂ ಅವರ ಬಳಿ ಶಕ್ತಿ ಇಲ್ಲ ಎಂದರು.
ಕಾಂಗ್ರೆಸ್ ಪಕ್ಷದ ಅಧ್ಯಕ್ಷರೇ ರಾಜೀನಾಮೆ ಕೊಟ್ಟಿರುವ ಕಾರಣ ಆ ಪಕ್ಷಕ್ಕೆ ದಿಕ್ಕು ದೆಸೆಯಿಲ್ಲ. ಕಾಂಗ್ರೆಸ್, ಜೆಡಿಎಸ್ ಪಕ್ಷ ಬಾಯಿ, ಬಾಯಿ ಎಂದವರು ಈಗ ವಿಲನ್ ಆಗಿದ್ದಾರೆ. ಜೆಡಿಎಸ್‌ನವರಿಗೆ ಒಳಗೆ ಚೂರಿ ಹಾಕಿದವರು ಯಾರು ಅಂತಾ ಗೊತ್ತಿದೆ. ಜೊತೆಗೆ ಮಂಡ್ಯ ಚುನಾವಣೆ ಬಗ್ಗೆ ಇಡೀ ರಾಜ್ಯಕ್ಕೆ ಗೊತ್ತಿದೆ ಎಂದರು.ಡಿಕೆಶಿ ಬಂಧನಕ್ಕೂ ಉಪಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಇಡಿ ಸ್ವಾಯತ್ತ ಸಂಸ್ಥೆ. ಈ ಹಿಂದೆ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಹಲವರನ್ನ ಬಂಧಿಸಲಾಗಿತ್ತು. ಹೀಗಾಗಿ ಡಿಕೆಶಿ ಬಂಧನದಿಂದ ಉಪ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದರು.