ಕೋಲಾರ:ಕ್ಷುಲ್ಲಕ ಕಾರಣಕ್ಕೆ ಎರಡು ಕುಟುಂಬಗಳ ನಡುವೆ ಆರಂಭವಾದ ಜಗಳ ಬಾಲಕನ ಕೊಲೆಯಲ್ಲಿ ಅಂತ್ಯವಾಗಿರುವ ದಾರುಣ ಘಟನೆ ಜಿಲ್ಲೆಯ ಮುಳಬಾಗಿಲು ತಾಲೂಕಿನ ಎಚ್.ಬೈಯಪ್ಪನಹಳ್ಳಿಯಲ್ಲಿ ನಡೆದಿದೆ.
ಪಂಕ್ಚರ್ ಮಾಡಿದನೆಂದು ಕಲ್ಲಿನಿಂದ ಹೊಡೆದು ಬಾಲಕನ ಪ್ರಾಣ ತೆಗೆದಳು.. ಕೋಲಾರದಲ್ಲೊಬ್ಬಳು ಕಿರಾತಕಿ!
ಪಕ್ಕದ ಮನೆಯಲ್ಲಿ ನಿಲ್ಲಿಸಿದ್ದ ಬೈಕ್ ಟೈರ್ನ್ನು ಈ ಬಾಲಕ ಪಂಚರ್ ಮಾಡಿದ್ದಾನೆ ಅಷ್ಟೇ. ಇದೇ ಕಾರಣಕ್ಕೆ ಕುಟುಂಬಗಳ ನಡುವೆ ಜಗಳ ಆರಂಭವಾಗಿ ಕೊನೆಗೆ ಬಾಲಕನ ಕೊಲೆಯೊಂದಿಗೆ ಅಂತ್ಯವಾಗಿರುವ ದಾರುಣ ಘಟನೆ ನಡೆದಿದೆ.
ಗೋವರ್ಧನ್ ಮೃತ ಬಾಲಕ
ಗೋವರ್ಧನ್ (5) ಮೃತ ಬಾಲಕ. ಈ ಬಾಲಕ ಪಕ್ಕದ ರೆಡ್ಡೆಮ್ಮ ಎಂಬುವರ ಮನೆಯಲ್ಲಿದ್ದ ಬೈಕ್ನ್ನು ಪಂಚರ್ ಮಾಡಿದ್ದಾನೆ. ಇದೇ ವಿಷಯಕ್ಕೆ ಮೃತ ಗೋವರ್ಧನ್ ತಾಯಿ ಲಕ್ಷ್ಮೀ ದೇವಮ್ಮಳೊಂದಿಗೆ ರೆಡ್ಡೆಮ್ಮ ಜಗಳ ತೆಗೆದಿದ್ದಾರೆ. ಈ ವೇಳೆ ಜಗಳ ತಾರಕಕ್ಕೇರಿದ್ದು, ಇಬ್ಬರ ನಡುವೆ ಮಾರಾಮಾರಿ ನಡೆದಿದೆ. ಅಲ್ಲದೆ ಇದೇ ವೇಳೆ ರೆಡ್ಡೆಮ್ಮ ಬಾಲಕನ ತಲೆಗೆ ಕಲ್ಲಿನಿಂದ ಹೊಡೆದಿದ್ದು, ಬಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಈ ಕುರಿತಂತೆಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.