ಕರ್ನಾಟಕ

karnataka

ETV Bharat / state

ತಮ್ಮನಿಗೆ ಕೊರೊನಾ ಸೋಂಕು: ಭಯದಿಂದ ಆತ್ಮಹತ್ಯೆಗೆ ಶರಣಾದ ಅಣ್ಣ..!

ಕೋಲಾರದ ಗಾಂಧಿ ನಗರದಲ್ಲಿ ಕೊರೊನಾ ಭಯದಿಂದ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ನಡೆದಿದೆ. ನಾಗರಾಜ್ (37) ಮನೆಯಲ್ಲಿ ನೇಣಿಗೆ ಶರಣಾಗಿರುವ ವ್ಯಕ್ತಿ. ತಮ್ಮನಿಗೆ ಕೊರೊನಾ ಪಾಸಿಟಿವ್​ ಬಂದಿದ್ದಕ್ಕೆ ಅಣ್ಣ ಬಾರದಲೋಕಕ್ಕೆ ತೆರಳಿದ್ದಾನೆ.

person Suicide  scared of corona
ತಮ್ಮನಿಗೆ ಕೊರೊನಾ ಸೋಂಕು: ಭಯದಿಂದ ಆತ್ಮಹತ್ಯೆ ಮಾಡಿಕೊಂಡ ಅಣ್ಣ..

By

Published : Jul 19, 2020, 9:11 AM IST

ಕೋಲಾರ: ನಗರದಲ್ಲಿ ವ್ಯಕ್ತಿಯೋರ್ವ ದುಡುಕಿನಲ್ಲಿ ನಿರ್ಧಾರ ತೆಗೆದುಕೊಂಡು ಬಾರದಲೋಕಕ್ಕೆ ತೆರಳಿದ್ದಾನೆ. ತಮ್ಮನಿಗೆ ಸೋಂಕು ತಗುಲಿದ್ದಕ್ಕೆ ತಮ್ಮ ಕುಟುಂಬಸ್ಥರಿಗೆಲ್ಲ ಕೊರೊನಾ ಬಂದಿರಬಹುದು ಎಂದು ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಗಾಂಧಿನಗರದಲ್ಲಿ ಕೊರೊನಾ ಭಯದಿಂದ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿದ್ದಾರುವ ಘಟನೆ ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ನಡೆದಿದೆ. ನಾಗರಾಜ್ (37) ಮನೆಯಲ್ಲಿ ನೇಣಿಗೆ ಶರಣಾಗಿರುವ ವ್ಯಕ್ತಿ. 30 ವರ್ಷದ ತಮ್ಮನಿಗೆ ಕೊರೊನಾ ಸೋಂಕು ದೃಢವಾದ ಹಿನ್ನೆಲೆ ಆತನನ್ನ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದ್ರೆ ತಮ್ಮನಿಗೆ ಕೊರೊನಾ ದೃಢವಾಗಿರುವ ವಿಚಾರ ತಿಳಿದು ಅಣ್ಣ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾನೆ.

ಕೂಲಿ ಕೆಲಸ ಮುಗಿಸಿಕೊಂಡು ಮನೆಗೆ ಬಂದ ನಾಗರಾಜ್​ಗೆ ತನ್ನ ತಮ್ಮನಿಗೆ ಕೊರೊನಾ ದೃಢಪಟ್ಟ ವಿಚಾರ ತಿಳಿದಿದೆ. ತಮ್ಮನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದರಿಂದ ತನಗೆ ಹಾಗೂ ಕುಟುಂಬಸ್ಥರಿಗೂ ಕೊರೊನಾ ತಗಲಿರಬಹುದು ಎಂಬ ಆತಂಕದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.

ಸದ್ಯ ಗಲ್ ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಎಲ್ಲಾ ಆಯಾಮಗಳಿಂದಲೂ ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details