ಕೋಲಾರ:ಹೊರ ಜಿಲ್ಲೆ ಬೆಂಗಳೂರು ಸೇರಿದಂತೆ ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಿಂದ ಆಗಮಿಸುವ ಜನರು ಜಿಲ್ಲೆಯ ಹಲವೆಡೆ ಲಸಿಕೆ ಪಡೆಯುತ್ತಿದ್ದಾರೆ. ಇದರಿಂದಾಗಿ ಜಿಲ್ಲೆಯ ಜನರಿಗೆ ವ್ಯಾಕ್ಸಿನ್ ಸಿಗುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೋಲಾರ ಜಿಲ್ಲೆಯ ಜನರಿಗಿಲ್ಲವೇ ವ್ಯಾಕ್ಸಿನ್?: ಜನರ ಅಸಮಾಧಾನ - ಕೋಲಾರದಲ್ಲಿ ಹೊರ ಜಿಲ್ಲೆ, ರಾಜ್ಯಗಳಿಂದ ಬಂದು ಲಸಿಕೆ ಪಡೆಯುತ್ತಿರುವ ಜನರು
ಜಿಲ್ಲೆಯಲ್ಲಿ ಬೆಂಗಳೂರು ಸೇರಿದಂತೆ ಹೊರಗಿನವರಿಗೆ ಲಸಿಕೆ ನೀಡುತ್ತಿರೋದಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ 6 ಲಸಿಕಾ ಕೇಂದ್ರಗಳಲ್ಲೂ ಬೆಂಗಳೂರಿನ ಜನರೇ ಲಸಿಕೆಗಾಗಿ ನೋಂದಣೆ ಮಾಡಿಸಿದ್ದು, ಸ್ಥಳೀಯರಿಗೆ ಲಸಿಕೆ ಸಿಗದ ಹಿನ್ನೆಲೆಯಲ್ಲಿ ಆನ್‌ಲೈನ್ ನೋಂದಣಿ ಸ್ಥಗಿತ ಮಾಡಿ ಟೋಕನ್ ವ್ಯವಸ್ಥೆ ಮಾಡಲು ಆರೋಗ್ಯ ಇಲಾಖೆ ಚಿಂತನೆ ಮಾಡಿದೆ.
ಕೋಲಾರದ ಇಟಿಸಿಎಂ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಶೇ.75 ರಷ್ಟು ಹೊರ ರಾಜ್ಯ ಹಾಗೂ ಜಿಲ್ಲೆಯ ಜನರಿಗೆ ವ್ಯಾಕ್ಸಿನ್ ನೀಡಲಾಗುತ್ತಿದೆ. ಬೆಂಗಳೂರಿನಿಂದ ವ್ಯಾಕ್ಸಿನೇಷನ್ ಪಡೆಯಲು ಬಂದಿದ್ದ ಸಾಕಷ್ಟು ಜನರು ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೆ ಇಳಿದ ಘಟನೆಯೂ ಲಸಿಕಾ ಕೇಂದ್ರದಲ್ಲಿ ನಡೆಯುತ್ತಿದೆ. ನಾವು ಆನ್ ಲೈನ್‌ನಲ್ಲಿ ನೋಂದಣಿ ಮಾಡಿಸಿದ್ದೇವೆ. ನಮಗೆ ಲಸಿಕೆ ನೀಡಿ ಎಂದು ಸ್ಥಳೀಯರು ಅಧಿಕಾರಿಗಳ ಜೊತೆ ವಾಗ್ವಾದ ನಡೆಸುತ್ತಿದ್ದಾರೆ. ಅಂತರ್ ಜಿಲ್ಲಾ ಹಾಗೂ ಅಂತರ ರಾಜ್ಯ ಓಡಾಟ ನಿರ್ಬಂಧಿಸಿದರೂ ಬೆಂಗಳೂರು ಸೇರಿದಂತೆ ಬೇರೆ ರಾಜ್ಯಗಳಿಂದ ನೂರಾರು ಜನರು ಕೋಲಾರಕ್ಕೆ ಬಂದು ಲಸಿಕೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ : ಮಾನವೀಯತೆ ಬತ್ತಿಹೋದ ಕಾಲದಲ್ಲಿ... ಲಾಠಿ ಹಿಡಿಯುವ ಕೈಯಲ್ಲಿ ಹಸಿದವರಿಗೆ ಅನ್ನ ವಿತರಣೆ!
TAGGED:
AV