ಕರ್ನಾಟಕ

karnataka

ETV Bharat / state

ಬಿಜೆಪಿಯ ಆಪರೇಷನ್ ಕಮಲ 12 ತಿಂಗಳಿಂದ ನಡೆಯುತ್ತಿದೆ: ಕೃಷ್ಣಬೈರೇಗೌಡ

ಲೋಕಸಭಾ ಚುನಾವಣೆ ಫಲಿತಾಂಶ ನೇರವಾಗಿ ರಾಜ್ಯ ಸರ್ಕಾರದ ಮೇಲೆ ಪರಿಣಾಮ ಬೀರಲ್ಲ. ಆದ್ರೆ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಜಿಲ್ಲಾ ಆಪರೇಷನ್​ ಕಮಲದ ಪ್ರಯತ್ನ ಬಿಜೆಪಿ ನಾಯಕರಿಂದ ನಿರಂತರವಾಗಿ ನಡೆಯುತ್ತಿದೆ ಎಂದು ಸಚಿವ ಕೃಷ್ಣಬೈರೇಗೌಡ ಆರೋಪಿಸಿದ್ದಾರೆ.

ಆಪರೇಷನ್ ಕಮಲದ ಗುಮ್ಮ ಕಳೆದ 12 ತಿಂಗಳಿಂದ ನಡೆಯುತ್ತಿದೆ

By

Published : May 26, 2019, 8:50 AM IST

ಕೋಲಾರ:ಲೋಕಸಭಾ ಚುನಾವಣೆಯ ಫಲಿತಾಂಶ ಸರ್ಕಾರದ ಮೇಲೆ ಪರಿಣಾಮ ಬೀರಲ್ಲವೆಂದಿರುವಬೆಂಗಳೂರು ಉತ್ತರ ಕ್ಷೇತ್ರದ ಪರಾಜಿತ ಅಭ್ಯರ್ಥಿ, ಸಚಿವ ಕೃಷ್ಣಬೈರೇಗೌಡ ಆಪರೇಷನ್​ ಕಮಲದ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.

ಕೋಲಾರದ ಪ್ರವಾಸಿ ಮಂದಿರದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಚುನಾವಣೆ ಸಂಬಂಧ ನಡೆದ ಪೂರ್ವಭಾವಿ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ 12 ತಿಂಗಳುಗಳಿಂದ ಆಪರೇಷನ್​ ಕಮಲ ಎನ್ನುವ ವಾಮಮಾರ್ಗದಲ್ಲಿ ಹಣ ಕೊಟ್ಟು ಶಾಸಕರನ್ನು ಖರೀದಿಸುವ ಪ್ರಯತ್ನ ನಡೆಯುತ್ತಿದೆ. ಈಗ ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಮತ್ತಷ್ಟು ಹೆಚ್ಚಾಗುವ ಸೂಚನೆಗಳಿವೆ ಎಂದ್ರು.

ಮೈತ್ರಿ ಸರ್ಕಾರ ಜನಪರ ಯೋಜನೆಗಳನ್ನು ನೀಡಿದ್ದರೂ ಸಹ ಅದನ್ನು ಜನರ ಬಳಿ ತೆಗೆದುಕೊಂಡು ಹೋಗಿ ವಿಶ್ವಾಸಗಳಿಸುವಲ್ಲಿ ನಾವು ವಿಫಲವಾಗಿದ್ದೇವೆ ಎಂದು ಲೋಕಸಭಾ ಚುನಾವಣೆಯ ಫಲಿತಾಂಶ ಕುರಿತು ಸಚಿವ ಕೃಷ್ಣಬೈರೇಗೌಡ ಬೇಸರ ವ್ಯಕ್ತಪಡಿಸಿದ್ರು. ಮೈತ್ರಿ ಸರ್ಕಾರಕ್ಕೆ ಈಗ ಸವಾಲಿನ ಸಮಯವಾಗಿದ್ದು, ಸದೃಢ ತೀರ್ಮಾನಗಳನ್ನು ತೆಗೆದುಕೊಂಡು ಹೋಗಬೇಕಾಗಿದೆ. ಈಗಾಗಲೇ ಸಿಎಂ ಕುಮಾರಸ್ವಾಮಿ ಜೊತೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರೊಂದಿಗೆ ರಾಜ್ಯದಲ್ಲಿ ಲೋಕಸಭಾ ಫಲಿತಾಂಶ ಮತ್ತು ದೋಸ್ತಿ ಸರ್ಕಾರದ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಸಿದ್ದಾರೆ ಎಂದರು. ಸಮ್ಮಿಶ್ರ ಸರ್ಕಾರದಲ್ಲಿ ಎರಡು ಪಕ್ಷಗಳು ಒಂದುಗೂಡಿ ಕೆಲಸ ಮಾಡುತ್ತಿವೆ. ಸಣ್ಣಪುಟ್ಟ ಗೊಂದಲಗಳು ಭಿನ್ನಾಭಿಪ್ರಾಯಗಳು ಸಹ ಇದ್ದು, ಅವನ್ನು ದೊಡ್ಡವರ ಬಳಿ ಕುಳಿತು ಬಗೆಹರಿಸಿಕೊಳ್ಳುತ್ತೇವೆ ಎಂದು ಸಚಿವರು ಹೇಳಿದ್ರು.

ಆಪರೇಷನ್ ಕಮಲದ ಗುಮ್ಮ ಕಳೆದ 12 ತಿಂಗಳಿಂದ ಕಾಡುತ್ತಿದೆ: ಸಚಿವ ಕೃಷ್ಣಬೈರೇಗೌಡ

ಇನ್ನು ಇವಿಎಂ ವಿಚಾರದಲ್ಲಿ ವಿಶ್ವಾಸ ಹಾಗೂ ನಂಬಿಕೆ ಮೂಡಿಸುವಂತಹ ಕೆಲಸವನ್ನು ಚುನಾವಣೆ ಆಯೋಗ ಮಾಡಿಲ್ಲ. ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಅನುಮಾನಗಳಿಗೆ ಇದುವರೆಗೂ ಆಯೋಗ ಏಕೆ ಫುಲ್ ಸ್ಟಾಪ್ ಇಟ್ಟಿಲ್ಲವೆಂದು ಸಚಿವ ಕೃಷ್ಣಬೈರೇಗೌಡ ಪ್ರಶ್ನಿಸಿದ್ರು.

For All Latest Updates

TAGGED:

AVBB

ABOUT THE AUTHOR

...view details