ಕೋಲಾರ:ಕೋಲಾರ: ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುತ್ತೇವೆ ಎಂದುಕೊಂಡಿದ್ದ ಪಕ್ಷಗಳೇ ಕೊನೆಗೆ ಜಿದ್ದಾ ಜಿದ್ದಿಗೆ ಬಿದ್ದು, ಇಬ್ಬರ ಜಗಳದಲ್ಲಿ ಮೂರನೇಯವರಿಗೆ ಲಾಭ ಎನ್ನುವಂತೆ ಕಾಂಗ್ರೆಸ್ ಗೆದ್ದಿದೆ.
ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಲ್ಲರ ಲೆಕ್ಕಾಚಾರವನ್ನು ಮೀರಿಸುವಂತೆ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಕುಮಾರ್ ಗೆಲುವು ಸಾಧಿಸಿದ್ದಾರೆ.
ಬಿಜೆಪಿ, ಜೆಡಿಎಸ್ ಮಧ್ಯದ ಜಿದ್ದಾಜಿದ್ದಿ ಹಾಗೂ ಕಾಂಗ್ರೆಸ್ ಪಕ್ಷದಲ್ಲಿನ ಅಸಮಾಧಾನದ ಮಧ್ಯೆಯೂ ಅನಿಲ್ ಕುಮಾರ್ ಗೆದ್ದಿದ್ದಾರೆ. ಒಟ್ಟು 5587 ಮತಗಳ ಪೈಕಿ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಕುಮಾರ್ಗೆ 2340 ಮತಗಳನ್ನು ಪಡೆದು ಜಯಗಳಿಸಿದ್ರೆ, ಬಿಜೆಪಿ ಅಭ್ಯರ್ಥಿ ವೇಣುಗೋಪಾಲ್ಗೆ 1899 ಮತ ಸಿಕ್ಕಿದೆ, ಜೆಡಿಎಸ್ ಅಭ್ಯರ್ಥಿ ರಾಮಚಂದ್ರಗೆ 1438 ಮತಗಳು ಸಿಕ್ಕಿವೆ, ಪಕ್ಷೇತರ ಅಭ್ಯರ್ಥಿ ಮತ್ತೊಬ್ಬ ಅನಿಲ್ ಕುಮಾರ್-10 ಮತ, 177 ಮತಗಳು ಅಸಿಂಧುವಾಗಿವೆ. ಈ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹೊಸ ಹುಮ್ಮಸ್ಸು ಬಂದಂತಾಗಿದೆ.
ಗೆಲುವಿನ ಬಳಿಕ ಕೈ ಕಾರ್ಯಕರ್ತರು ಪಟಾಕಿ ಹೊಡೆದು ಸಂಭ್ರಮಿಸಿದರು.