ಕೋಲಾರ:ಎಂಟಿಬಿ ನಾಗರಾಜ್ ಅವರಿಗೆ ಪಕ್ಷ ಎಲ್ಲವನ್ನೂ ಕೊಟ್ಟಿದೆ. ಆದರೂ ಅವರು ಪಕ್ಷ ಬಿಡುವರು ಎಂದರೆ ನಾವೇನೂ ಮಾಡೋದಕ್ಕೆ ಆಗೋದಿಲ್ಲ ಎಂದು ಕೋಲಾರದಲ್ಲಿ ಸಚಿವ ಮುನಿರತ್ನ ಅವರು ಹೇಳಿಕೆ ನೀಡಿದ್ದಾರೆ.
ಕೋಲಾರದಲ್ಲಿ ಸಚಿವ ಮುನಿರತ್ನ ಅವರು ಮಾತನಾಡಿದರು ಇಂದು ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಂಟಿಬಿ ಅವರು ಚುನಾವಣೆಯಲ್ಲಿ ಸೋತಿದ್ದರೂ ಅವರನ್ನ ವಿಧಾನಪರಿಷತ್ಗೆ ಸದಸ್ಯರನ್ನಾಗಿ ಮಾಡಿ ಸಚಿವರನ್ನ ಮಾಡಿದೆ. ಅವರಿಗೆ ಪಕ್ಷ ಯಾವುದೇ ಕೊರತೆ ಮಾಡಿಲ್ಲ ಎಂದರು.
ಇನ್ನು ಸಮ್ಮಿಶ್ರ ಸರ್ಕಾರ ಬಿಟ್ಟು ಬಂದು ಅವರು ಸಚಿವರಾಗಿದ್ದಾರೆ. ಪಕ್ಷ ಇನ್ನೇನು ಕೊಡಬೇಕು. ಇರುವುದನ್ನೇ ಕೊಟ್ಟಿದೆ ಎಂದು ಹೇಳಿದ್ರು. ಅಲ್ಲದೇ ಆಯಾ ಕ್ಷೇತ್ರಗಳಲ್ಲಿ ಅಭಿವೃದ್ದಿ ಕಾಮಗಾರಿಗಳಿಗೆ ಅನುದಾನಗಳನ್ನ ನೀಡಿದ್ದು, ಅಭಿವೃದ್ದಿಯತ್ತ ಸಾಗುತ್ತಿದೆ. ಹೀಗಾಗಿ ಎಂಟಿಬಿ ನಾಗರಾಜ್ ಅವರು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ ಎಂದು ಹೇಳಿದರು.
ನಾನು ಮಾತನಾಡುವುದು ಸೂಕ್ತವಲ್ಲ: ಇನ್ನು ವಿಶ್ವನಾಥ್ ಅವರಿಗೂ ಸಚಿವ ಸ್ಥಾನ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ. ಅವರು ಹಿರಿಯರು ಅವರು ಮಾತನಾಡುವುದನ್ನ ಪಕ್ಷ ಗಂಭೀರವಾಗಿ ತೆಗೆದುಕೊಳ್ಳುತ್ತೆ. ಹೀಗಾಗಿ, ಅವರ ಬಗ್ಗೆ ನಾನು ಮಾತನಾಡುವುದು ಸೂಕ್ತವಲ್ಲ ಎಂದು ತಿಳಿಸಿದರು.
ರಾಜ್ಯಕ್ಕೆ ಮೈಸೂರು ಸಂಸ್ಥಾನದ ಕೊಡುಗೆ ಅಪಾರವಾಗಿದ್ದು, ಅವರ ಹೆಸರು ಎಲ್ಲೇ ಇಟ್ಟರೂ ಕಡಿಮೆ ಎಂದು ಟಿಪ್ಪು ಎಕ್ಸ್‌ಪ್ರೆಸ್ ರೈಲಿಗೆ ಮರುನಾಮಕರಣ ಮಾಡಿರುವುದರ ಕುರಿತು ಕೋಲಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಅವರು ಪ್ರತಿಕ್ರಿಯೆ ನೀಡಿದರು.
ಮೈಸೂರು ಸಂಸ್ಥಾನದ ಕೊಡುಗೆ ಅಪಾರ: ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರು ಸಂಸ್ಥಾನದ ಕೊಡುಗೆ ರಾಜ್ಯದಲ್ಲಿ ಅಪಾರವಾಗಿದ್ದು, ಮೈಸೂರು ಸಂಸ್ಥಾನದ ಒಡೆಯರ್ ಹೆಸರು ಎಲ್ಲಿಟ್ಟರೂ ಕಡಿಮೆ ಎಂದರು. ಅಲ್ಲದೇ, ಮೈಸೂರು ಸಂಸ್ಥಾನದ ಕೊಡುಗೆ ಪ್ರತಿಯೊಬ್ಬ ಜನತೆಯ ಮೇಲೆಯೂ ಋಣ ಇದೆ. ಹೀಗಾಗಿ ಆ ಋಣ ತೀರಿಸಬೇಕಾದರೆ ಅವರ ಹೆಸರು ಎಷ್ಟು ಕಡೆ ಇಟ್ಟರೂ ತಪ್ಪಿಲ್ಲ ಎಂದು ಹೇಳಿದರು.
ಓದಿ:ಬಿಜೆಪಿಯಿಂದ ರಾಜ್ಯ ಪ್ರವಾಸ: ಜನಸಂಕಲ್ಪ ಯಾತ್ರೆಗೆ ನಾಳೆ ರಾಯಚೂರಿನಲ್ಲಿ ಚಾಲನೆ