ಕೋಲಾರ:ಜೆಲ್ಲಿ ಕ್ರಷರ್ನಲ್ಲಿ ಸ್ಪೋಟಕ ಸಿಡಿದು ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಾಲೂರು ತಾಲೂಕಿನ ಕೊಮ್ಮನಹಳ್ಳಿ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ. ಸಂಜೀವಿನಿ ಸ್ಟೋನ್ ಕ್ರಷರ್ನಲ್ಲಿ ಘಟನೆ ನಡೆದಿದ್ದು, ಬಿಹಾರ ಮೂಲದ ರಾಕೇಶ್ ಸಾಣಿ (34) ಮೃತ ಕಾರ್ಮಿಕ.
ಪ್ರಕರಣ ಮುಚ್ಚಿಹಾಕುವ ಯತ್ನ:ಸ್ಪೋಟಕ ಸಿಡಿದು ಕಾರ್ಮಿಕ ಮೃತಪಟದ್ಟರೂ, ರಸ್ತೆ ಅಪಘಾತದಲ್ಲಿ ಕಾರ್ಮಿಕ ಸಾವು ಎಂದು ಎಫ್ಐಆರ್ ದಾಖಲು ಮಾಡಿ ಪ್ರಕರಣ ಮುಚ್ಚಿಹಾಕುವ ಯತ್ನ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಮಾಲೂರು ಶಾಸಕ ನಂಜೇಗೌಡ ನಿರ್ವಹಣೆ ಮಾಡುತ್ತಿದ್ದ ಕ್ರಷರ್ ಇದಾಗಿದ್ದು, ರಾತ್ರೋ ರಾತ್ರಿ ಪ್ರಕರಣ ಮುಚ್ಚಿಹಾಕಲು ಪ್ರಯತ್ನ ನಡೆಸಲಾಗಿದೆ ಎನ್ನಲಾಗಿದೆ.