ಕರ್ನಾಟಕ

karnataka

ETV Bharat / state

ವರುಣನ ಅವಾಂತರ: ಟೊಮ್ಯಾಟೊ,ಪಪ್ಪಾಯಿ ಬೆಳೆ ನಾಶ - kannadanews

ಕೋಲಾರ ಜಿಲ್ಲೆಯ ಕೆಲವು ಭಾಗಗಳಲ್ಲಿ ಗಾಳಿ ಸಹಿತ ಭಾರೀ ಮಳೆಯಾಗಿದ್ದು,ಟೊಮ್ಯಾಟೋ ಹಾಗೂ ಪಪ್ಪಾಯ ಬೆಳೆಗಳಿಗೆ ಹಾನಿಯುಂಟಾಗಿದೆ.

ಭಾರೀ ಮಳೆಗೆ ಟೊಮ್ಯಾಟೊ ಪಪ್ಪಾಯಿ ಬೆಳೆ ನಾಶ

By

Published : Jun 8, 2019, 11:10 PM IST

ಕೋಲಾರ: ಕೋಲಾರ ಜಿಲ್ಲೆಯ ಕೆಲವು ಭಾಗಗಳಲ್ಲಿ ಗಾಳಿ ಸಹಿತ ಭಾರೀ ಮಳೆಯಾಗಿದ್ದು,ಟೊಮ್ಯಾಟೋ ಹಾಗೂ ಪಪ್ಪಾಯ ಬೆಳೆಗಳಿಗೆ ಹಾನಿಯುಂಟಾಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.

ಭಾರೀ ಮಳೆಗೆ ಟೊಮ್ಯಾಟೊ ಪಪ್ಪಾಯಿ ಬೆಳೆ ನಾಶ

ಕಳೆದ ರಾತ್ರಿ ಸುರಿದ ಆಲಿಕಲ್ಲು ಸಹಿತ ಬಿರುಗಾಳಿ ಮಳೆಗೆ ಕೋಲಾರ ತಾಲ್ಲೂಕು ಚೆನ್ನಿಗಾನಹಳ್ಳಿ, ಕ್ಯಾಲನೂರು, ಪೆರ್ಜೇನಹಳ್ಳಿ, ಸೇರಿದಂತೆ ಹಲವೆಡೆ ಮಳೆ ಹಾನಿಯಾಗಿದೆ. ಅದರಲ್ಲೂ ಪ್ರಮುಖವಾಗಿ ಚೆನ್ನಿಗಾನಹಳ್ಳಿ ಗ್ರಾಮದ ಪ್ರಕಾಶ್​ ಎಂಬುವರ ನಾಲ್ಕು ಎಕರೆ ಪಪ್ಪಾಯ ತೋಟ ಹಾಗೂ ಮೂರು ಎಕರೆ ಟೊಮ್ಯಾಟೋ ಬೆಳೆ ಸಂಪೂರ್ಣವಾಗಿ ಹಾಳಾಗಿದ್ದು ರೈತ ಕಣ್ಣೀರು ಹಾಕುವ ಪರಿಸ್ಥಿತಿ ಬಂದೊದಗಿದೆ. ರಾತ್ರಿ ಸುರಿದ ಮಳೆಯಿಂದ ರೈತ ಪ್ರಕಾಶ್​ಗೆ ಅಂದಾಜುಿ ಹತ್ತು ಲಕ್ಷ ರೂದಷ್ಟು ನಷ್ಟವಾಗಿದ್ದು, ಸರ್ಕಾರ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ. ಇದಲ್ಲದೆ ಜಿಲ್ಲೆಯ ಹಲವೆಡೆ ಬಿರುಗಾಳಿಗೆ ಹತ್ತಾರು ವಿದ್ಯುತ್​ ಕಂಬಗಳು, ಹಾಗೂ ಬೃಹತ್​ ಗಾತ್ರದ ಮರಗಳು ನೆಲಕ್ಕುರುಳಿ ಅಪಾರ ಹಾನಿಯಾಗಿದೆ.

For All Latest Updates

ABOUT THE AUTHOR

...view details