ಕರ್ನಾಟಕ

karnataka

ETV Bharat / state

ಹೊರ ರಾಜ್ಯದ ತಂಡದಿಂದ ವರ್ತೂರು​ ಪ್ರಕಾಶ್ ಮೇಲೆ ಹಲ್ಲೆ ಶಂಕೆ! - ಮಾಜಿ ಸಚಿವ ವರ್ತೂರು ಪ್ರಕಾಶ್

ಹಣಕಾಸು ವಿಚಾರವಾಗಿ ಮಾಜಿ ಸಚಿವ ವರ್ತೂರು ಪ್ರಕಾಶ್ ಅವರ ಮೇಲೆ ಹೊರ ರಾಜ್ಯದ ತಂಡ ಹಲ್ಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

Ex minister Varthur prakash kidnapped case
ವರ್ತೂರು ಪ್ರಕಾಶ್

By

Published : Dec 2, 2020, 12:56 AM IST

Updated : Dec 2, 2020, 6:12 AM IST

ಕೋಲಾರ:ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್ ಹಾಗೂ ಹಲ್ಲೆ ವಿಚಾರ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಹಣಕಾಸು ವಿಚಾರವಾಗಿ ಹೊರ ರಾಜ್ಯದ ತಂಡ ಹಲ್ಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಮಾಜಿ ಸಚಿವ ವರ್ತೂರ್​ ಪ್ರಕಾಶ್​ ಅವರನ್ನ ಕೋಲಾರ ತಾಲೂಕಿನ ಬೆಗ್ಲಿಹೊಸಹಳ್ಳಿ ಬಳಿ ಬೆನ್ನು ಹತ್ತಿದ್ದ ಆಗಂತುಕರು, ಬುಧವಾರ ರಾತ್ರಿ ಬೆಂಗಳೂರಿಗೆ ಹೋಗುವ ವೇಳೆ ಅಡ್ಡಗಟ್ಟಿದ್ದಾರೆ. ಈ ವೇಳೆ 20ಕ್ಕೂ ಹೆಚ್ಚು ಜನರ ತಂಡ ಬುಧವಾರ ರಾತ್ರಿ ಬೆಗ್ಲಿಹೊಸಹಳ್ಳಿಯ ತೋಟದ ಮನೆಯಿಂದ ಬೆಂಗಳೂರಿಗೆ ಹೊರಟಿದ್ದ ವರ್ತೂ್ರು ಅವರನ್ನ ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ ಎನ್ನಲಾಗ್ತಿದೆ.

ಕಿಡ್ನಾಪ್ ಮಾಡಿ, ಮೂರು ದಿನ ಕೂಡಿ ಹಾಕಿದ್ರು: ದೂರು ದಾಖಲಿಸಿದ ವರ್ತೂರ್ ಪ್ರಕಾಶ್

ಕೋಲಾರ ತಾಲೂಕಿನ ಬೆಗ್ಲಿಹೊಸಳ್ಳಿ ಬಳಿ ಕಾರನ್ನ ಅಡ್ಡಗಟ್ಟಿರುವ ದುಷ್ಕರ್ಮಿಗಳು ಕಾರಿನ ಗಾಜು ಒಡೆದು ವರ್ತೂರು ಪ್ರಕಾಶ್ ಮೇಲೆ ಹಲ್ಲೆ ನಡೆಸಿದ್ರು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ವರ್ತೂರ್​ ಉಲ್ಲೇಖಿಸಿದ್ದಾರೆ.

ಕಿಡ್ನಾಪ್ ಮಾಡಿರುವ ತಂಡ ಹಲ್ಲೆ ನಡೆಸಿ, ಬೆಳ್ಳಂದೂರು ಬಳಿ ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಈ ಸಂಬಂದ ಖುದ್ದು ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಅವರ ಹೇಳಿಕೆ ಹಾಗೂ ಸ್ಥಳದಲ್ಲಿ ನಡೆದಿರುವ ಸನ್ನಿವೇಶಕ್ಕೂ ವ್ಯತ್ಯಾಸಗಳಿವೆ. ಅಲ್ಲದೆ ಅವರ ಕಾರು ಚಾಲಕ ಕೋಲಾರ ನಗರದ ಚೌಡೇಶ್ವರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಆದರೆ ಆಸ್ಪತ್ರೆ ಸಿಬ್ಬಂದಿ ಹೇಳುವ ಪ್ರಕಾರ ಬೈಕ್ ಅಪಘಾತದಲ್ಲಿ ಓರ್ವ ದಾಖಲಾಗಿದ್ದು, ಆದರೆ ಅವರು ಮಾಜಿ ಸಚಿವರ ಕಾರು ಚಾಲಕನಾ ಅನ್ನೋದು ಗೊತ್ತಿಲ್ಲ ಎಂದಿದ್ದಾರೆ.

ಮಹಾರಾಷ್ಟ್ರದಲ್ಲಿ ಹಸು ವ್ಯಾಪಾರ ಮಾಡಿ ಪೇಚೆಗೆ ಸಿಲುಕಿದ್ರಾ, ಇಲ್ಲಾ ಇದಕ್ಕೆ ಬೇರೆ ಯಾವುದಾದ್ರು ಲಿಂಕ್ ಇದೆಯಾ ಎನ್ನುವುದು ಸದ್ಯದ ಕುತೂಹಲಕ್ಕೆ ಕಾರಣವಾಗಿದೆ.

Last Updated : Dec 2, 2020, 6:12 AM IST

ABOUT THE AUTHOR

...view details