ಕರ್ನಾಟಕ

karnataka

ಕೋಲಾರದಲ್ಲಿ ಮಕ್ಕಳಾಯ್ತು, ಇದೀಗ ಗರ್ಭಿಣಿಯರಿಗೆ ಕೊರೊನಾ..!

By

Published : Jun 28, 2020, 5:02 PM IST

ಕೋಲಾರದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತಲಿದ್ದು, ಇದುವರೆಗೂ 104 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

corona updates in kolara
ಕೋಲಾರದಲ್ಲಿ ಕೊರೊನಾ ಸೋಂಕು

ಕೋಲಾರ: ಕೊರೊನಾ ಅಟ್ಟಹಾಸವು ಜಿಲ್ಲೆಯಲ್ಲಿ ಮುಂದುವರೆದಿದ್ದು, ಗರ್ಭಿಣಿಯರನ್ನು ಬಿಡದೆ ಕಾಡುತ್ತಿರುವುದು ಜಿಲ್ಲಾಡಳಿತಕ್ಕೆ ಸವಾಲಾಗಿದೆ. ಇಬ್ಬರು ಗರ್ಭಿಣಿಯರು ಗುಣಮುಖರಾಗಿ ಮನೆ ಸೇರಿದ್ರೆ, ಮತ್ತೊಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೋಲಾರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯು ನೂರರ ಗಡಿ ದಾಟಿದ್ದು, ಮಕ್ಕಳು, ವೃದ್ಧರು ಹಾಗೂ ಮಹಿಳೆಯರು ಸೋಂಕಿಗೆ ಒಳಗಾಗುತ್ತಿದ್ದಾರೆ.

ಕೋಲಾರ ತಾಲೂಕಿನ ಬೆಟ್ಟಹೊಸಪುರ ಗ್ರಾಮದ ಒಬ್ಬರು ಹಾಗೂ ಮುಳಬಾಗಲು ತಾಲೂಕಿನ 22 ವರ್ಷದ ಗರ್ಭಿಣಿ ಕೊರೊನಾ ಮುಕ್ತರಾಗಿ ಮನೆಗೆ ವಾಪಸ್ ಆಗಿದ್ದಾರೆ. ಉಳಿದಂತೆ ಇನ್ನೊಬ್ಬರು ಕೋಲಾರದ ನೂರ್ ನಗರದ 24 ವರ್ಷದ ಗರ್ಭಿಣಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಇದು ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ಸವಾಲ್ ಆಗಿ ಪರಿಣಮಿಸಿದೆ.

ಕೋಲಾರ ಜಿಲ್ಲಾಸ್ಪತ್ರೆ ಸರ್ಜನ್ ನಾರಾಯಣಸ್ವಾಮಿ

ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತಲಿದ್ದು, ಇದುವರೆಗೂ 104 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಕೊರೊನಾದಿಂದ ಒಬ್ಬರು ಸಾವನ್ನಪ್ಪಿದ್ದರೆ, 42 ಜನರು ಬಿಡುಗಡೆಯಾಗಿದ್ದು, 57 ಜನ ಸೋಂಕಿತರು ಸಕ್ರಿಯರಾಗಿದ್ದಾರೆ.

ಜಿಲ್ಲಾಡಳಿತ ಹಾಗೂ ಆರೊಗ್ಯ ಇಲಾಖೆ ಎಚ್ಚೆತ್ತುಕೊಂಡು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದ್ದು, 60 ವರ್ಷ ಮೇಲ್ಪಟ್ಟ ಸೋಂಕಿತರು 13 ಜನರಿದ್ದು, ಅವರನ್ನು ಗುಣಮುಖರನ್ನಾಗಿ ಮಾಡುವುದು ಸವಾಲಿನ ಕೆಲಸವೇ ಆಗಿದೆ. ಹೀಗಾಗಲೇ ಜಿಲ್ಲಾಸ್ಪತ್ರೆಯಲ್ಲಿ ಮಾತ್ರ 200 ಬೆಡ್​​ಗಳ ತಯಾರಿ ಮಾಡಿಕೊಂಡಿರುವ ಆರೋಗ್ಯ ಇಲಾಖೆ ಅಧಿಕಾರಿಗಳು, 10 ವೆಂಟಿಲೇಟರ್ ಹಾಗೂ ಸಿಬ್ಬಂದಿಗೆ ತರಬೇತಿ ನೀಡಿದ್ದಾರೆ. ಮತ್ತಷ್ಟು ಕೊರೊನಾ ಸೋಂಕಿತರು ದಾಖಲಾದ್ರು ಕೂಡ ಅವರಿಗೆ ಸೂಕ್ತ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಸಜ್ಜಾಗಿದೆ.

ABOUT THE AUTHOR

...view details