ಕೊಡಗು: ಡಿವೈಎಸ್‌ಪಿ ಎಂ.ಕೆ.ಗಣಪತಿ ಅನುಮಾನಾಸ್ಪದ ಸಾವು ಪ್ರಕರಣ ಸಂಬಂಧ ಈಗಾಗಲೇ ಸಿಬಿಐ ಕೋರ್ಟ್‌ಗೆ ತನಿಖಾ ವರದಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಮೃತ ಅಧಿಕಾರಿಯ ಕುಟುಂಬಕ್ಕೆ ಕಾನೂನಾತ್ಮಕವಾಗಿ ಸಹಕಾರ ನೀಡಲು ಸಿದ್ದರಿರುವುದಾಗಿ ಮಾಜಿ ಸ್ಪೀಕರ್ ಹಾಗೂ ಶಾಸಕ ಕೆ.ಜಿ.ಬೋಪಯ್ಯ ಹೇಳಿದ್ದಾರೆ.
ಎಂ.ಕೆ.ಗಣಪತಿ ಕುಟುಂಬಕ್ಕೆ ಕಾನೂನಾತ್ಮಕ ಸಹಕಾರ ನೀಡಲು ಸಿದ್ಧ: ಶಾಸಕ ಕೆ.ಜಿ.ಬೋಪಯ್ಯ
ಡಿವೈಎಸ್‌ಪಿ ಎಂ.ಕೆ.ಗಣಪತಿ ಸಾವು ಅನುಮಾನಾಸ್ಪದವಾಗಿದ್ದು ಈಗಾಗಲೇ ಸಿಬಿಐ ಕೋರ್ಟ್‌ಗೆ ವರದಿ ನೀಡಿದೆ. ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಲು ನಾನು ಸಹಕಾರ ನೀಡುತ್ತೇನೆ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದ್ದಾರೆ.
ಶಾಸಕ ಕೆ.ಜಿ.ಬೋಪಯ್ಯ
3 ವರ್ಷಗಳ ನಂತರ ಪೊಲೀಸ್ ಅಧಿಕಾರಿ ಎಂ.ಕೆ.ಗಣಪತಿ ಸಾವಿಗೆ ಸಂಬಂಧ ಮಡಿಕೇರಿ ನ್ಯಾಯಾಲಯಕ್ಕೆ ಸಿಬಿಐ ಬಿ ರಿಪೋರ್ಟ್ ಸಲ್ಲಿಸಿದೆ.
ಕೇಂದ್ರ ತನಿಖಾ ಸಂಸ್ಥೆಯ ವರದಿ ಬಹಿರಂಗಗೊಂಡ ಬಳಿಕವಷ್ಟೇ ಪೂರ್ಣ ಮಾಹಿತಿ ಸಿಗಲಿದೆ. ಬಿ ರಿಪೋರ್ಟ್ ಆಗಿದ್ದರೆ ಮತ್ತೆ ಅದನ್ನು ಪ್ರಶ್ನಿಸುವ ಹಕ್ಕು ದೂರುದಾರರಿಗೆ ಇದೆ. ಪ್ರಾಮಾಣಿಕ, ದಕ್ಷ ಅಧಿಕಾರಿ ಶಂಕಾಸ್ಪದ ಸಾವಿಗೆ ಕಾರಣ ತಿಳಿಯಬೇಕು. ಈ ಬಗ್ಗೆ ಅವರ ಸಹೋದರನನ್ನು ಸಂಪರ್ಕಿಸಿ ಮಾಹಿತಿ ಪಡೆಯುತ್ತೇನೆ ಎಂದರು.