ಕರ್ನಾಟಕ

karnataka

ETV Bharat / state

ಅವೈಜ್ಞಾನಿಕ ಕಾಮಗಾರಿ: ಸಾಲುಕೊಪ್ಪಲುವಿನಲ್ಲಿ ಜಿನುಗುತ್ತಿದೆ ನಾಲೆ ನೀರು..! - ಕೊಡಗು ಸುದ್ದಿ

ಸೋಮವಾರಪೇಟೆ ತಾಲೂಕಿನ ಸಾಲುಕೊಪ್ಪಲು ನೀರು ಪಾಲಾಗುತ್ತಿದೆ. 1973 ರಲ್ಲಿ ಹಾರಂಗಿ ಜಲಾಶಯಕ್ಕೆ ನಿರ್ಮಿಸಿದ ಎಡದಂಡೆ ಕಾಲುವೆ ಸಾಲುಕೊಪ್ಪಲು ಗ್ರಾಮವನ್ನು ಆವರಿಸಿ ಹೋಗಿದೆ.

Water is getting in salukoppalu by unscientific work.
ಅವೈಜ್ಞಾನಿಕ ಕಾಮಗಾರಿ : ಸಾಲುಕೊಪ್ಪಲುವಿನಲ್ಲಿ ಜಿನುಗುತ್ತಿದೆ ನಾಲೆ ನೀರು..!

By

Published : Sep 24, 2020, 7:54 PM IST

ಕೊಡಗು: ರೈತರ ಬದುಕು ಹಸನಾಗಿಸಲು ಹಾರಂಗಿ ಜಲಾಶಯ ನಿರ್ಮಿಸಿ ಎಡದಂಡೆ ಕಾಲುವೆ ನಿರ್ಮಿಸಲಾಗಿತ್ತು. ಆದರೆ, ಗ್ರಾಮ ಇರುವ ಮಟ್ಟಕ್ಕಿಂತ 20 ಅಡಿ ಎತ್ತರದಲ್ಲಿ ಮುಖ್ಯ ಕಾಲುವೆ ನಿರ್ಮಿಸಿದ್ದರಿಂದ ಈಗ ಇಡೀ ಊರು ತೇವಾಂಶವಾಗಿ 20 ಕ್ಕೂ ಹೆಚ್ಚು ಮನೆಗಳು ಬಿದ್ದುಹೋಗಿವೆ.

ಅವೈಜ್ಞಾನಿಕ ಕಾಮಗಾರಿ : ಸಾಲುಕೊಪ್ಪಲುವಿನಲ್ಲಿ ಜಿನುಗುತ್ತಿದೆ ನಾಲೆ ನೀರು..!

ಸೋಮವಾರಪೇಟೆ ತಾಲೂಕಿನ ಸಾಲುಕೊಪ್ಪಲು ನೀರು ಪಾಲಾಗುತ್ತಿದೆ. 1973 ರಲ್ಲಿ ಹಾರಂಗಿ ಜಲಾಶಯಕ್ಕೆ ನಿರ್ಮಿಸಿದ ಎಡದಂಡೆ ಕಾಲುವೆ ಸಾಲುಕೊಪ್ಪಲು ಗ್ರಾಮವನ್ನು ಆವರಿಸಿ ಹೋಗಿದೆ. ಪರಿಣಾಮ ಕಾಲುವೆಯಲ್ಲಿ ನೀರು ಹರಿಯುವ ವರ್ಷದ ಏಳು ತಿಂಗಳು ಗ್ರಾಮ ಮನೆಗಳಲ್ಲಿ ಜಲವುಕ್ಕುತ್ತದೆ. ಮನೆಗಳ ಇಡೀ ಗೋಡೆಗಳು ಶೀತದಿಂದ ನೆನೆದು ಇದುವರೆಗೆ 20 ಕ್ಕೂ ಹೆಚ್ಚುಗಳು ಬಿದ್ದು ಹೋಗಿವೆ. ಜೊತೆಗೆ ಇಡೀ ಗ್ರಾಮದಲ್ಲಿ ಸೊಳ್ಳೆಗಳ ಕಾಟ ಮಿತಿ ಮೀರಿದ್ದು, ಕಾಯಿಲೆಗಳು ಹರಡುವ ಭೀತಿ ಇದೆ. ಅದರಲ್ಲೂ ಈಗ ಜ್ವರ ಬಂತು ಎಂದರೆ, ಕೊರೊನಾ ಎಂದು ಸಮಸ್ಯೆ ಎದುರಿಸಬೇಕಾಗುತ್ತದೆ ಎನ್ನೋದು ಜನರ ಆತಂಕ.

ಇಡೀ ಗ್ರಾಮದಲ್ಲಿ ಸಂಪೂರ್ಣ ನೀರು ಬರಲು ಆರಂಭಿಸಿದ್ದರಿಂದ ಕಳೆದ ಐದು ವರ್ಷಗಳ ಹಿಂದೆ ಗ್ರಾಮದ ಐವತ್ತು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲು ಚಿಕ್ಕನಾಯಕನ ಹೊಸಳ್ಳಿಯಲ್ಲಿ ಹಾರಂಗಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು 6 ಎಕರೆ ಭೂಮಿಯನ್ನು ಖರೀದಿಸಿ ಲೇಔಟ್ ಕೂಡ ನಿರ್ಮಿಸಿದ್ದರು. ಜೊತೆಗೆ ಐವತ್ತು ಕುಟುಂಬಗಳ ಮನೆ ನಿರ್ಮಾಣಕ್ಕೆ ಎಂದು 1.25 ಕೋಟಿ ರೂಪಾಯಿ ಬಿಡುಗಡೆ ಕೂಡ ಮಾಡಲಾಯಿತು. ಆದರೆ, ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಲಿಲ್ಲ. ಹೀಗಾಗಿ ಲೇಔಟ್ ಮಾಡಿದ್ದ ಭೂಮಿಯಲ್ಲೇ ಜನರು ಮತ್ತೆ ಕೃಷಿ ಮಾಡುತ್ತಿದ್ದಾರೆ.

ಬಿಡುಗಡೆಯಾದ ಹಣವನ್ನು ಜನರ ಮನೆ ನಿರ್ಮಾಣಕ್ಕೆ ವಿತರಿಸುವ ಬದಲು ನೀರು ಬರದಂತೆ ಮಾಡುವುದಾಗಿ ಅದೇ ಹಣದಿಂದ ಈಗಿರುವ ಗ್ರಾಮದಲ್ಲಿ ಕಾಂಕ್ರಿಟ್ ರಸ್ತೆ ಮತ್ತು ಚರಂಡಿಯನ್ನು ಮಾಡಿ ಹಣವನ್ನು ಪೋಲು ಮಾಡಿದರು. ಇದರಿಂದಾಗಿ ಗ್ರಾಮದಲ್ಲಿ ಇಂದಿಗೂ ಕಾಲುವೆಯಲ್ಲಿ ನೀರು ಬಿಟ್ಟಾಗಲೆಲ್ಲ ಬರೋಬ್ಬರಿ ಆರರಿಂದ ಏಳು ತಿಂಗಳು ತೀವ್ರ ಸಮಸ್ಯೆ ಎದುರಿಸುವಂತೆ ಆಗಿದೆ ಎನ್ನೋದು ಗ್ರಾಮದ ಮುಖಂಡರ ಆರೋಪ.

ABOUT THE AUTHOR

...view details