ಕೊಡಗು:ಜಿಲ್ಲೆಗೆ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಕೊಡಗಿನಲ್ಲಿ ಎರಡನೇ ಹಂತದ ಟ್ವಿಟರ್ ಅಭಿಯಾನ ಶುರುವಾಗಿದೆ.
ಜಿಲ್ಲೆಗೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ದಿನವಿಡೀ ಟ್ವಿಟರ್ ಮೂಲಕ ಆಸ್ಪತ್ರೆ ಅಗತ್ಯತೆ ಕೂಗು ವ್ಯಾಪಕವಾಗಿ ವ್ಯಕ್ತವಾಗಿದೆ. ಸಂಜೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಟ್ವೀಟ್, ಟ್ಯಾಗ್ ಮಾಡಲು ತಯಾರಿ ನಡೆಸಲಾಗಿದೆ. ಸಂಜೆ 6 ಗಂಟೆಯಿಂದ 8 ಗಂಟೆವರೆಗೆ ಟ್ವಿಟರ್ ಅಭಿಯಾನ ಪ್ರಾರಂಭಿಸಲು ನಿರ್ಧರಿಸಲಾಗಿದೆ.
# We Need Emergency Hospital In Kodagu ಎಂಬ ಹ್ಯಾಷ್ ಟ್ಯಾಗ್ನಡಿಯಲ್ಲಿ @ sriramulu bjp ಮತ್ತು @CM of Karnataka ಟ್ಯಾಗ್ ಮಾಡಲು ನಿರ್ಧಾರಿಸಿದ್ದು, ಟ್ವಿಟರ್ ಅಭಿಯಾನ ನಡೆಸಿ ಸಚಿವರ ಗಮನ ಸೆಳೆಯಲು ಚಿಂತನೆ ನಡೆಸಲಾಗಿದೆ. ಈಗಾಗಲೇ ನೆಟ್ಟಿಗರಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಟ್ವೀಟ್, ಟ್ಯಾಗ್ ಆರಂಭವಾಗಿದೆ.
ಕೊಡಗು ಭೌಗೋಳಿಕವಾಗಿಯೇ ಗುಡ್ಡಗಾಡು ಪ್ರದೇಶ. ಕಳೆದ ಎರಡು ವರ್ಷಗಳಿಂದ ಪ್ರವಾಹದಿಂದ ಜಿಲ್ಲೆಯ ಜನತೆ ತತ್ತರಿಸಿ ಹೋಗಿದ್ದಾರೆ. ತುರ್ತಾಗಿ ಚಿಕಿತ್ಸೆ ಪಡೆಯಲು ನಾವು ಮಂಗಳೂರು ಅಥವಾ ಮೈಸೂರಿಗೆ ಹೋಗಬೇಕು. ಅಲ್ಲಿಗೆ ಹೋಗಿ ತಲುಪಲು ಸಾಕಷ್ಟು ಸಮಯ ಬೇಕಾಗುತ್ತದೆ. ಹೋಗುವ ದಾರಿ ಮಧ್ಯೆ ಏನಾಗುತ್ತದೋ ಎನ್ನುವ ಆತಂಕವೂ ಇರುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ಅತ್ಯಾಧುನಿಕ ಸೌಲಭ್ಯವುಳ್ಳ ಆಸ್ಪತ್ರೆಯ ಅಗತ್ಯವಿದೆ. ಅದನ್ನು ಸಕಾರಗೊಳಿಸಲು ಸ್ಥಳೀಯ ಜನಪ್ರತಿನಿಧಿಗಳು ಮುಂದಾಗಬೇಕು ಎಂದು ಸ್ಥಳೀಯ ನಿವಾಸಿ ಚಂದ್ರಪ್ಪ ಅಭಿಪ್ರಾಯ ಹಂಚಿಕೊಂಡರು.