ಕೊಡಗು(ತಲಕಾವೇರಿ): ಬ್ರಹ್ಮಗಿರಿ ಬೆಟ್ಟಸಾಲಿನ ಗಜಗಿರಿ ಗುಡ್ಡ ಕುಸಿದು ಕಣ್ಮರೆಯಾಗಿದ್ದ ಐವರಲ್ಲಿ ಇಂದು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಸಿಕ್ಕಂತಹ ಮೃತದೇಹ, ನಾರಾಯಣ ಆಚಾರ್ ಸಹಾಯಕ ಅರ್ಚಕ ರವಿ ಕಿರಣ್ ಅವರದ್ದು ಎಂದು ತಿಳಿದು ಬಂದಿದೆ.
ಬ್ರಹ್ಮಗಿರಿ ಬೆಟ್ಟ ದುರಂತ: ಇಂದು ಪತ್ತೆಯಾದ ಶವ ಸಹಾಯಕ ಅರ್ಚಕ ರವಿ ಕಿರಣ್ ಅವರದ್ದು... ಕೊಡಗು ಜಿಲ್ಲಾಡಳಿತ
ಗುಡ್ಡ ಕುಸಿತದಿಂದ ಇದುವರೆಗೆ ಕಣ್ಮರೆಯಾಗಿದ್ದ ಐವರಲ್ಲಿ ಪ್ರಸ್ತುತ ಮೂವರ ಮೃತದೇಹಗಳು ಸಿಕ್ಕಿದ್ದು, ಇಂದು ಪತ್ತೆಯಾದ ಮೃತ ದೇಹ ನಾರಾಯಣ ಆಚಾರ್ ಅವರ ಸಹಾಯಕ ಅರ್ಚಕ ರವಿ ಕಿರಣ್ ಎಂಬುವರದ್ದು ಎಂದು ಕೊಡಗು ಜಿಲ್ಲಾಡಳಿತದ ಸ್ಪಷ್ಟಪಡಿಸಿದೆ.
ಕೇರಳ ರಾಜ್ಯದಿಂದ ತಲಕಾವೇರಿಗೆ ಸಹಾಯಕ ಅರ್ಚಕ ವೃತ್ತಿಗೆ ರವಿ ಕಿರಣ್ ಬಂದಿದ್ದರು ಎಂದು ಜಿಲ್ಲಾಡಳಿತ ಅಧಿಕೃತವಾಗಿ ತಿಳಿಸಿದೆ. ಮಧ್ಯಾಹ್ನ ನಾಗತೀರ್ಥ ಎನ್ನುವ ಸ್ಥಳದಲ್ಲಿ ಸಂಪೂರ್ಣ ಕೊಳೆತು ಗುರುತಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ಶವ ದೊರೆತಿತ್ತು. ಗುಡ್ಡ ಕುಸಿತದಿಂದ ಇದುವರೆಗೆ ಕಣ್ಮರೆಯಾಗಿದ್ದ ಐವರಲ್ಲಿ ಪ್ರಸ್ತುತ ಮೂವರ ಮೃತದೇಹಗಳು ಸಿಕ್ಕಿವೆ.
ಉಳಿದಂತೆ ಪ್ರಧಾನ ಅರ್ಚಕ ನಾರಾಯಣ ಆಚಾರ್ ಪತ್ನಿ ಶಾಂತಾ ಹಾಗೂ ಮಂಗಳೂರು ಮೂಲದ ಮತ್ತೋರ್ವ ಸಹಾಯಕ ಅರ್ಚಕ ಪತ್ತೆಯಾಗಬೇಕಿದೆ. ಈಗಾಗಲೇ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಅರಣ್ಯ ಇಲಾಖೆ ಹಾಗೂ ಪೊಲೀಸರು ತೀವ್ರ ಶೋಧ ಮುಂದುವರೆಸಿದ್ದಾರೆ.