ಕೊಡಗು: ಸೀಲ್‌ಡೌನ್ ಪ್ರದೇಶದ ಜನರಿಗೆ ಕನಿಷ್ಠ ಸೌಲಭ್ಯಗಳನ್ನು ಒದಗಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಮಡಿಕೇರಿ ಭಗವತಿ ನಗರದ ನಿವಾಸಿಗಳು ಆರೋಪಿಸಿದ್ದಾರೆ.
ಕನಿಷ್ಠ ಸೌಲಭ್ಯಗಳೂ ಸಿಗುತ್ತಿಲ್ಲ; ಸೀಲ್‌ಡೌನ್ ನಿವಾಸಿಗಳ ಅಸಮಾಧಾನ
ಕೊಡಗು ಜಿಲ್ಲೆಯ ಮಡಿಕೇರಿಯ ತಾಲೂಕಿನ ಭಗವತಿ ನಗರವನ್ನ ಸೀಲ್‌ಡೌನ್ ಮಾಡಲಾಗಿದ್ದು, ಜಿಲ್ಲಾಡಳಿತ 9 ದಿನಗಳಿಂದ ಈ ಪ್ರದೇಶದ ಜನರಿಗೆ ಕನಿಷ್ಠ ಸೌಲಭ್ಯಗಳನ್ನೂ ಒದಗಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕನಿಷ್ಠ ಸೌಲಭ್ಯ ನಿಡದ ಜಿಲ್ಲಾಡಳಿತದ ವಿರುದ್ಧ ಸೀಲ್‌ಡೌನ್ ನಿವಾಸಿಗಳ ಅಸಮಾಧಾನ
ಸೀಲ್‌ಡೌನ್ ಮಾಡಿದ 9 ದಿನಗಳಿಂದಲೂ ನಾವೂ ಇಲ್ಲಿಯೇ ಇದ್ದೇವೆ. ಆದರೆ, ಜಿಲ್ಲಾಡಳಿತ ಈ ಪ್ರದೇಶದ ಜನರಿಗೆ ಕನಿಷ್ಠ ಸೌಲಭ್ಯಗಳನ್ನೂ ಒದಗಿಸಿಲ್ಲ. ಇಲ್ಲಿಯವರೆಗೂ ಯಾವೊಬ್ಬ ಆರೋಗ್ಯ ಅಧಿಕಾರಿಯೂ ಈ ಕಡೆ ಸುಳಿದಿಲ್ಲ. ಸೀಲ್‌ಡೌನ್ ಪ್ರದೇಶದ ಜನರ ಗಂಟಲು ದ್ರವವನ್ನೂ ಪರೀಕ್ಷಿಸಿಲ್ಲ.
ಸೀಲ್‌ಡೌನ್ ಪ್ರದೇಶದ ಜನರಿಗೆ ಎಲ್ಲ ಸೌಲಭ್ಯ ಕೊಡುತ್ತೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ನಮ್ಮ ಪಾಲಿಗೆ ಸರ್ಕಾರ ಹಾಗೂ ಜಿಲ್ಲಾಡಳಿತ ಸತ್ತು ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.