ವಿರಾಜಪೇಟೆ: ದಶಕಗಳಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿದೆ. ಇದರಿಂದ ಜನ ಸಂಚಾರಕ್ಕೆ ತೊಂದರೆಯಾಗಿದೆ. ರಸ್ತೆಯ ತುಂಬೆಲ್ಲಾ ಗುಂಡಿಗಳಿದ್ದು, ಗ್ರಾಮಸ್ಥರು ಓಡಾಟ ನಡೆಸಲು ಭಯಪಡುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ರಸ್ತೆ ಸರಿ ಹೋಗಿಲ್ಲ. ಇದರಿಂದ ಬೇಸತ್ತ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಇದು ದಕ್ಷಿಣ ಕೊಡಗಿನ ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಪೆಗ್ಗರಿಕಾಡು ಕಾಲೋನಿಯ ರಸ್ತೆಯ ಅವ್ಯವಸ್ಥೆ. ಪೆಗ್ಗರಿಕಾಡು ಕಾಲೋನಿಯಲ್ಲಿ ಶೇ 90 ರಷ್ಟು ಜನ ದಿನಕೂಲಿ ಅವಲಂಬಿತ ಕುಟುಂಬಗಳಿವೆ. ಇಲ್ಲಿ ಸುಮಾರು 40-50 ರಿಂದ ಮನೆಗಳಿದ್ದು 150 ಮತದಾರರಿದ್ದಾರೆ.