ಮಡಿಕೇರಿ (ಕೊಡಗು): ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಕಾಣಸಿಗುತ್ತಿದ್ದ ಅದೆಷ್ಟೋ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ವಿಶೇಷವಾಗಿ ಮಲೆನಾಡು ಭಾಗದಲ್ಲಿ ಮಳೆಗಾಲ ಆರಂಭದ ಸಮಯದಲ್ಲಿ ಆಚರಿಸಿಕೊಂಡು ಬರುತ್ತಿದ್ದ ಕ್ರೀಡೆಗಳು ಇಲ್ಲದಂತಾಗುತ್ತಿವೆ. ಆದರೆ, ಮಡಿಕೇರಿಯ ಬೇಕೋಟು ಮಕ್ಕ ಎಂಬ ತಂಡ ಇಂತಹ ಗ್ರಾಮೀಣ ಕಲೆಗಳನ್ನ ಉಳಿಸುವ ಪ್ರಯತ್ನ ಮಾಡಿದೆ.
ಒಂದು ಕಡೆ ಬಿಟ್ಟು ಬಿಟ್ಟು ಸುರಿಯುತ್ತಿರುವ ಜಿಟಿ ಜಿಟಿ ಮಳೆ, ಮತ್ತೊಂದು ಕಡೆ ನಾ ಮುಂದು, ತಾ ಮುಂದು ಎಂದು ಕೆಸರು ಗದ್ದೆಯಲ್ಲಿ ಹಗ್ಗ ಜಗ್ಗಾಟದಲ್ಲಿ ತೊಡಗಿರುವ ಮಹಿಳೆಯರು, ಪುರುಷರು. ಈ ದೃಶ್ಯ ಕಂಡುಬಂದಿದ್ದು, ಮಡಿಕೇರಿ ತಾಲೂಕಿನ ಅರುವತ್ತೊಕ್ಲುವಿನ ಹಾಕತ್ತೂರು ಗ್ರಾಮದಲ್ಲಿ.
ಬೇಕೋಟು ಮಕ್ಕ ಎಂಬ ತಂಡದ ವತಿಯಿಂದ ಹಾಕತ್ತೂರಿನಲ್ಲಿ ವರ್ಷದ ಮೊದಲ ಕೆಸರು ಗದ್ದೆ ಕ್ರೀಡಾಕೂಟ ಆಯೋಜಿಸಲಾಗಿತ್ತು. ಈ ಕ್ರೀಡಾಕೂಟದಲ್ಲಿ ಪುರುಷರು, ಮಹಿಳೆಯರು ಹಾಗೂ ಮಕ್ಕಳು ಕೆಸರು ಗದ್ದೆಯಲ್ಲಿ ಆಟವಾಡಿ ಸಖತ್ ಎಂಜಾಯ್ ಮಾಡಿದ್ರು.