ಕರ್ನಾಟಕ

karnataka

ETV Bharat / state

ವಿಕಲಚೇತನ ವ್ಯಾಪಾರಿ ಮೇಲೆ ನಗರಸಭೆ ಸದಸ್ಯೆ ಹಲ್ಲೆ ಆರೋಪ: ಸೂಕ್ತ ತನಿಖೆಗೆ ಆದೇಶ - ಬೀದಿ ಬದಿ ವ್ಯಾಪಾರಿ ಮೇಲೆ ಹಲ್ಲೆ

ಅಂತಾರಾಷ್ಟ್ರೀಯ ವಿಕಲಚೇತನ ಬ್ಯಾಡ್ಮಿಂಟನ್ ಆಟಗಾರನೊಬ್ಬ ಹೊಟ್ಟೆಪಾಡಿಗಾಗಿ ರಾಜಾಸೀಟ್ ಬಳಿ ಬೀದಿ ಬದಿ ವ್ಯಾಪಾರ ಮಾಡಿಕೊಂಡಿದ್ದು, ಅಂಗಡಿಯ ಶುಚಿತ್ವಕ್ಕೆ ಸಂಬಂಧಿಸಿದಂತೆ ಮಡಿಕೇರಿ ನಗರಸಭೆ ಸದಸ್ಯೆ ಹಾಗೂ ಆಕೆಯ ಪತಿ ವ್ಯಾಪಾರಿ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

Municipal council member assault on disabled merchant
ವ್ಯಾಪಾರಿ ಮೇಲೆ ನಗರಸಭೆ ಸದಸ್ಯೆ ಹಲ್ಲೆ ಆರೋಪ

By

Published : Feb 4, 2022, 10:32 AM IST

ಮಡಿಕೇರಿ: ಜನಪ್ರತಿನಿಧಿಗಳು ಅಂದ್ರೆ ಜನಸೇವೆ ಮಾಡುವ ನಾಯಕರು ಎಂದು ಭಾವಿಸಿದ್ದೇವೆ. ಆದರೆ ಜನಸೇವೆ ಮಾಡಬೇಕಿರುವ ಜನಪ್ರತಿನಿಧಿಗಳೇ ತಮ್ಮ ಅಧಿಕಾರವನ್ನ ದುರುಪಯೋಗ ಮಾಡಿಕೊಂಡಿರುವ ಸಾಕಷ್ಟು ಉದಾಹರಣೆಗಳನ್ನ ಅನೇಕ ಬಾರಿ ನೋಡಿದ್ದೇವೆ. ಇದೀಗ ಅಂತಹುದ್ದೇ ಪ್ರಕರಣವೊಂದು ಮಡಿಕೇರಿಯಲ್ಲಿ ನಡೆದಿದ್ದು, ನಗರಸಭೆ ಸದಸ್ಯೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಡಗು ಜಿಲ್ಲೆಯ ಮಡಿಕೇರಿಯ ಹೃದಯ ಭಾಗದಲ್ಲಿನ ರಾಜಾಸೀಟ್ ಬಳಿ ಹೊಟ್ಟೆಪಾಡಿಗಾಗಿ ಬೀದಿ ಬದಿ ವ್ಯಾಪಾರ ಮಾಡಿಕೊಂಡಿದ್ದ ಅಂತಾರಾಷ್ಟ್ರೀಯ ವಿಕಲಚೇತನ ಬ್ಯಾಡ್ಮಿಂಟನ್ ಆಟಗಾರ ಜಂಷದ್ ಎಂಬುವರ ಮೇಲೆ ನಗರ ಸಭಾ ಸದಸ್ಯೆ ದರ್ಪ ತೋರಿದ್ದಾರೆ ಎನ್ನಲಾಗಿದೆ.

ವ್ಯಾಪಾರಿ ಮೇಲೆ ನಗರಸಭೆ ಸದಸ್ಯೆ ಹಲ್ಲೆ ಆರೋಪ

ಜಂಷದ್ ಕಳೆದ ಹತ್ತು ವರ್ಷಗಳಿಂದ ನಗರಸಭೆಯಿಂದ ಲೈಸೆನ್ಸ್ ಪಡೆದು ರಾಜಾಸೀಟ್​ನ ಎದುರು ಚಿಪ್ಸ್​ ಅಂಗಡಿ ನಡೆಸುತ್ತಿದ್ದಾನೆ . ಮೊನ್ನೆ ಸಂಜೆ ಪ್ರವಾಸಿಗರು ಇದ್ದ ವೇಳೆ ಅಂಗಡಿಯ ಶುಚಿತ್ವ ವಿಚಾರಕ್ಕೆ ಸಂಬಂಧಿಸಿದಂತೆ ಮಡಿಕೇರಿ ನಗರಸಭೆ ಸದಸ್ಯೆ ಶ್ವೇತಾ ಮತ್ತು ಆಕೆಯ ಪತಿ ಪ್ರಶಾಂತ್ ರಂಪಾಟ ಮಾಡಿ, ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಘಟನಾವಳಿಯನ್ನ ಮೊಬೈಲ್​ನಲ್ಲಿ ಚಿತ್ರಿಸುತ್ತಿದ್ದ ಜಂಷದ್​ನ ಸ್ನೇಹಿತನಿಂದ ಮೊಬೈಲ್ ಕಸಿಯಲು ಯತ್ನಿಸಿ, ಆತನ ಕಪಾಳಕ್ಕೆ ಹೊಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಓದಿ:ಇಂದೂ ಕೋವಿಡ್​ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ.. ಒಟ್ಟಾರೆ ಸಾವಿನ ಸಂಖ್ಯೆ 5ಲಕ್ಷಕ್ಕೆ ಏರಿಕೆ!

ಈ ಘಟನೆ ಬಳಿಕ ನಗರಸಭೆ ಸದಸ್ಯೆಯ ವರ್ತನೆಗೆ ಜಿಲ್ಲಾದ್ಯಂತ ವಿರೋಧ ವ್ಯಕ್ತವಾಗಿದೆ. ಪ್ರಕರಣದ ಕುರಿತು ಮಡಿಕೇರಿ ನಗರಸಭೆ ಆಯುಕ್ತ ರಾಮದಾಸ್ ಸೂಕ್ತ ತನಿಖೆಗೆ ಆದೇಶ ನೀಡಿದ್ದಾರೆ. ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ABOUT THE AUTHOR

...view details