ಕೊಡಗು : ಜಿಲ್ಲೆಯ ಶನಿವಾರಸಂತೆ ಹೋಬಳಿಯಾದ್ಯಂತ ನಿನ್ನೆ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ ಹಲವು ಗ್ರಾಮಗಳ ಮನೆಗಳ ಮೇಲ್ಛಾವಣಿ ಹಾರಿಹೋಗಿವೆ.
ಬಿರುಗಾಳಿ ಸಹಿತ ಮಳೆಗೆ ಧರೆಗುರುಳಿದ ಮನೆಗಳ ಮೇಲ್ಛಾವಣಿ,ವಿದ್ಯುತ್ ಕಂಬಗಳು.. - Kodagu rain news
ನಿನ್ನೆ ಸಂಜೆ ಸುರಿದ ಬಿರುಗಾಳಿ ಮಳೆಗೆ ಕೊಡಗು ಜಿಲ್ಲೆಯ ಶನಿವಾರಸಂತೆ ಹೋಬಳಿಯ ಅಪ್ಪಶೆಟ್ಟಳ್ಳಿ, ದೊಡ್ಡ ಬಿಳಾಹ, ಗಸುಳುಗಳಲೆ ಕಾಲೋನಿ ಹಾಗೂ ಚಿನ್ನಳ್ಳಿ ಗ್ರಾಮಗಳ ಹಲವು ಮನೆಗಳ ಮೇಲ್ಛಾವಣಿ ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ.
ಬಿರುಗಾಳಿ ಮಳೆಗೆ ಧರೆಗುರುಳಿದ ಮನೆಗಳ ಮೇಲ್ಛಾವಣಿ,ವಿದ್ಯುತ್ ಕಂಬಗಳು
ನಿನ್ನೆ ಸಂಜೆ ಗುಡುಗು ಸಹಿತ ಪ್ರಾರಂಭವಾದ ಬಿರುಗಾಳಿ ಮಳೆಗೆ ಶನಿವಾರಸಂತೆ ಸಮೀಪದ ಅಪ್ಪಶೆಟ್ಟಳ್ಳಿ, ದೊಡ್ಡ ಬಿಳಾಹ, ಗಸುಳುಗಳಲೆ ಕಾಲೋನಿ ಹಾಗೂ ಚಿನ್ನಳ್ಳಿ ಗ್ರಾಮಗಳ ಹಲವು ಮನೆಗಳ ಮೇಲ್ಛಾವಣಿ ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿ ಅಪಾರ ನಷ್ಟ ಸಂಭವಿಸಿದೆ. ಮುಂಗಾರು ಪೂರ್ವದಲ್ಲಿ ಮಳೆಯ ಅಬ್ಬರ ಕಂಡು ಸ್ಥಳೀಯರು ಆತಂಕಗೊಂಡಿದ್ದಾರೆ.