ಕರ್ನಾಟಕ

karnataka

ETV Bharat / state

ಕೊಡಗಿನಲ್ಲಿ ಮುಂದುವರೆದ ವ್ಯಾಘ್ರ ಘರ್ಜನೆ: ಜನರಲ್ಲಿ ಹೆಚ್ಚಿದ ಆತಂಕ - tiger attack

ದಕ್ಷಿಣ ಕೊಡಗು ಭಾಗದಲ್ಲಿ ಹುಲಿ ಹಾವಳಿ ಹೆಚ್ಚಾಗಿದ್ದು, ಸಾಲು ಸಾಲಾಗಿ ಜಾನುವಾರುಗಳನ್ನು ಬಲಿ ಪಡೆಯುತ್ತಿದೆ. ಹುಲಿ ದಾಳಿಗೆ ಬಲಿಯಾದ ಜಾನುವಾರುಗಳಿಗೆ ಸೂಕ್ತ ಪರಿಹಾರ ನೀಡುವಂತೆ ಸ್ಥಳೀಯರಿಂದ ಅರಣ್ಯ ಇಲಾಖೆಗೆ ಒತ್ತಾಯ.

continued-tiger-attack-in-kodagu-increased-anxiety-among-people
ಕೊಡಗಿನಲ್ಲಿ ಮುಂದುವರೆದ ವ್ಯಾಘ್ರ ಘರ್ಜನೆ: ಜನರಲ್ಲಿ ಹೆಚ್ಚಿದ ಆತಂಕ

By

Published : Dec 21, 2022, 10:35 PM IST

ಕೊಡಗಿನಲ್ಲಿ ಮುಂದುವರೆದ ವ್ಯಾಘ್ರ ಘರ್ಜನೆ: ಜನರಲ್ಲಿ ಹೆಚ್ಚಿದ ಆತಂಕ

ಕೊಡಗು: ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯತಿ ಒಳಪಟ್ಟ ಹರಿಹರ ಗ್ರಾಮದ ಮರಡ ಜಗನ್ ಹಸುವನ್ನು ತಡರಾತ್ರಿ ಹುಲಿ ಹಸುವಿನ ಮೇಲೆ ದಾಳಿ ಮಾಡಿ ಕೊಂದು ಹಾಕಿದೆ.

ಈ ಸಮಯದಲ್ಲಿ ಹುಲಿ ಕಾಡು ಬಿಟ್ಟು ನಾಡಿಗೆ ಬಂದಿರುವುದು ಹಾಗೂ ಹರಿಹರ ಭಾಗದಲ್ಲಿ ಸತತವಾಗಿ ಹುಲಿ ದಾಳಿ ಮಾಡುತ್ತಿದೆ. ಅದು ಅಲ್ಲದೆ ಈ ಸಮಯದಲ್ಲಿ ಕಾಫಿ ಫಸಲು ಕೊಯ್ಯಲು ರೈತರು, ಕಾರ್ಮಿಕರು ತೋಟದಲ್ಲಿ ಕೆಲಸದಲ್ಲಿ ನಿರತರಾಗಿದ್ದಾರೆ.

ಈ ನಿಟ್ಟಿನಲ್ಲಿ ಗ್ರಾಮಕ್ಕೆ ಹುಲಿ ಬಂದಿರುವುದು ರೈತರಲ್ಲಿ ಆತಂಕ ಉಂಟುಮಾಡಿದೆ. ಹಾಗೆಯೇ ದಕ್ಷಿಣ ಕೊಡಗಿನ ಸುತ್ತಮುತ್ತ ಒಬ್ಬರೇ ಓಡಾಡಲು ಕೂಡ ಜನತೆ ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಹುಲಿಯು ಕೂತೂರು ಕಾಲೋನಿಯ ಕಾರ್ಮಿಕನ ಮೇಲೆ ದಾಳಿಮಾಡಿ ಕೊಂದು ಹಾಕಿತ್ತು.

ಇದೀಗ ಮತ್ತೆ ಅದೇ ಭಾಗದಲ್ಲಿ ಹುಲಿ ದಾಳಿ ನಡೆಸುತ್ತಿದ್ದು, ಜ‌ನತೆ ಆತಂಕದಲ್ಲೆ ಕಾಲ‌ ಕಳೆಯುವಂತಾಗಿದೆ. ಹೀಗಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಹುಲಿ ಹಾವಳಿಯ ಸಮಸ್ಯೆಗೆ ಪರಿಹಾರ ನೀಡುವಂತೆ ಹಾಗೂ ಹುಲಿ ದಾಳಿಗೆ ಬಲಿಯಾದ ಜಾನುವಾರುವಿಗೆ ಸೂಕ್ತ ಪರಿಹಾರ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಬಿಳಿಗಿರಿರಂಗನ ಬೆಟ್ಟದಲ್ಲಿ ಹುಲಿ ಸಾವು: ಅರಣ್ಯ ಇಲಾಖೆ ನಡೆಗೆ ಪರಿಸರವಾದಿ ಆಕ್ರೋಶ

ABOUT THE AUTHOR

...view details