ಮಡಿಕೇರಿ(ಕೊಡಗು):ಸೇನಾಧಿಕಾರಿಗಳ ಸಾವಿನಲ್ಲಿ ವಿಕೃತ ಸಂಭ್ರಮ ಪಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.
ಸೇನಾಧಿಕಾರಿಗಳ ಸಾವಿನಲ್ಲಿ ವಿಕೃತ ಸಂಭ್ರಮ.. ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಪ್ರತಾಪ್ ಸಿಂಹ ಆಗ್ರಹ
ಹೆಲಿಕಾಪ್ಟರ್ ದುರಂತದಿಂದ ಇಡೀ ದೇಶವೇ ಸಂಕಟ, ನೋವಿನಲ್ಲಿದೆ. ಈ ನಡುವೆ ಅದನ್ನು ಸಂಭ್ರಮಿಸುವುದನ್ನು ಕಂಡಾಗ ಬೇಸರ ಆಗುತ್ತದೆ. ಅಂತವರ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದು ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.
ಪರಿಷತ್ ಚುನಾವಣೆ ಹಿನ್ನೆಲೆ ಶುಕ್ರವಾರ ಮಡಿಕೇರಿಯಲ್ಲಿ ಮತ ಚಲಾಯಿಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಾಹ್ಯ ಶತ್ರುಗಳಿಗಿಂತ ಆಂತರಿಕ ಶತ್ರುಗಳು ಹೆಚ್ಚು ಅಪಾಯಕಾರಿ. ಹೆಲಿಕಾಪ್ಟರ್ ದುರಂತವನ್ನು ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ದೇಶದ್ರೋಹಿಗಳು ಬಿಂಬಿಸುತ್ತಿದ್ದಾರೆ. ಅವರು ಯಾವತ್ತಿಗೂ ನಮ್ಮ ದೇಶಕ್ಕೆ ಅಪಾಯಕಾರಿ ಎಂದು ಕಿಡಿಕಾರಿದರು.
ಇಡೀ ದೇಶವೇ ಸಂಕಟ, ನೋವಿನಲ್ಲಿದೆ. ಈ ನಡುವೆ ಅದನ್ನು ಸಂಭ್ರಮಿಸುವುದನ್ನು ಕಂಡಾಗ ಬೇಸರ ಆಗುತ್ತದೆ. ಅಂತವರ ವಿರುದ್ಧ ಕಠಿಣ ಕ್ರಮ ಆಗಬೇಕು. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಒತ್ತಾಯಿಸುತ್ತೇನೆ ಎಂದರು.