ಕರ್ನಾಟಕ

karnataka

ETV Bharat / state

ಕೊಡಗು, ಸುಳ್ಯದಲ್ಲಿ ಮತ್ತೆ ಭೂಕಂಪನ: ಭಾರೀ ಶಬ್ದದೊಂದಿಗೆ ನಡುಗಿದ ಭೂಮಿ - ವಿಡಿಯೋ

ಕೊಡಗು, ಸುಳ್ಯದ ಕೆಲ ಗ್ರಾಮಗಳಲ್ಲಿ ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.

Again earth quake in Kodagu district
ಕೊಡಗಿನಲ್ಲಿ ಮತ್ತೆ ಭೂಮಿಕಂಪನ

By

Published : Jun 28, 2022, 9:29 AM IST

Updated : Jun 28, 2022, 10:34 AM IST

ದಕ್ಷಿಣ ಕನ್ನಡ/ಕೊಡಗು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಮತ್ತು ಕೊಡಗಿನಲ್ಲಿ ಮತ್ತೆ ಭೂಮಿ ಕಂಪಿಸಿದ್ದು, ಜಿಲ್ಲೆಯ ಜನ ಭಯ ಭೀತರಾಗಿದ್ದಾರೆ. ಬೆಳಗ್ಗೆ 7.45 ರ ಸುಮಾರಿಗೆ 3.4 ಸೆಕೆಂಡುಗಳ ಕಾಲ ಭೂ ಕಂಪನದ ಅನುಭವವಾಗಿದ್ದು, ಜನರು ಮನೆಯಿಂದ ಹೊರ ಬಂದಿದ್ದಾರೆ. ಕೊಡಗಿನ ಕರಿಕೆ, ಪೆರಾಜೆ, ಭಾಗಮಂಡಲ, ಮಡಿಕೇರಿ, ನಾಪೋಕ್ಲು ಮತ್ತು ಸುಳ್ಯದ ಸಂಪಾಜೆ , ಗೂನಡ್ಕ, ಗುತ್ತಿಗಾರು ಸೇರಿದಂತೆ ಕೆಲವೆಡೆ ಭೂಕಂಪನ ಅನುಭವವಾಗಿದೆ.

ಕೊಡಗು ಜಿಲ್ಲೆಯಲ್ಲಿ ಎರಡು ಮೂರು ದಿನಗಳ ಅಂತರದಲ್ಲಿ 3ನೇ ಬಾರಿಗೆ ಭೂ ಕಂಪಿಸಿದ್ದು, ಬೆಟ್ಟಗುಡ್ಡಗಳಲ್ಲಿ ವಾಸಮಾಡುವ ಜಿಲ್ಲೆಯ ಜನತೆಯಲ್ಲಿ ಮತ್ತೆ ಆತಂಕ ಉಂಟಾಗಿದೆ. ಹಾಗೆಯೇ ಸುಳ್ಯದಲ್ಲಿ ಎರಡನೇ ಬಾರಿ ಈ ಅನುಭವ ಆಗಿದೆ. 6 ದಿನದ ಹಿಂದೆ ಸೋಮವಾರಪೇಟೆ ಭಾಗ ಮತ್ತು ಹಾಸಗ ಗಡಿ ಭಾಗದಲ್ಲಿ ಭೂ ಕಂಪನವಾಗಿದ್ರೆ ಎರಡು ದಿನಗಳ ಹಿಂದೆ ಸಂಪಾಜೆ ಭಾಗದಲ್ಲಿ ಭೂ ಕಂಪನವಾಗಿ ಮನೆಗಳಿಗೆ ಹಾನಿಯಾಗಿತ್ತು. ಇಂದು ಬೆಳಿಗ್ಗೆ ಭಾಗಮಂಡಲ ಸುತ್ತಮುತ್ತಲಿನ ಭಾಗದಲ್ಲಿ ಭೂಮಿ‌ ಕಂಪಿಸಿದೆ.

ಭಾರೀ ಶಬ್ದದೊಂದಿಗೆ ನಡುಗಿದ ಭೂಮಿ

ಸುಳ್ಯದಲ್ಲಿ ಭಾರೀ ವಿಚಿತ್ರ ಶಬ್ದದೊಂದಿಗೆ ಈ ಹಿಂದೆ ಸಂಭವಿಸಿದ ಭೂಕಂಪದ ಶಬ್ದಕಿಂತಲೂ ಹೆಚ್ಚಿನ ರೀತಿಯಲ್ಲಿ ಕೆಲವು ಸೆಕೆಂಡ್‌ಗಳ ಕಾಲ ಭೂಮಿ ಕಂಪಿಸಿದೆ. ಜನರು ಆತಂಕದಲ್ಲಿ ಮನೆಯಿಂದ ಹೊರ ಬಂದಿದ್ದಾರೆ. ಪಾತ್ರೆಗಳು, ಪೀಠೋಪಕರಣಗಳು ಅಲುಗಾಡಿವೆ. ಮನೆಯ ಮೇಲಿನ ರೂಪಿಂಗ್ ಶೀಟ್‌ಗಳು ಕಂಪಿಸಿವೆ.

ಇದನ್ನೂ ಓದಿ :ಸುಳ್ಯದಲ್ಲಿ 2.3 ಪರಿಮಾಣದಲ್ಲಿ ಭೂಕಂಪನ : ಕೆಎಸ್ಎನ್‌ಡಿಎಂಸಿ ಅಧಿಕೃತ ಮಾಹಿತಿ ಬಿಡುಗಡೆ

ಸುಳ್ಯದಲ್ಲಿ ಮೂರು ದಿನಗಳ ಹಿಂದೆ ಕೂಡಾ ಬೆಳಗ್ಗೆ ಭೂಮಿಯಿಂದ ವಿಚಿತ್ರ ಶಬ್ದ ಕೇಳಿ ಬಂದಿತ್ತಲ್ಲದೇ ಕೆಲವು ಸೆಕೆಂಡ್​​ಗಳ ಕಾಲ ಭೂಮಿ ಕಂಪಿಸಿತ್ತು. ಅಂದು ಆ ಭೂಕಂಪನದ ತೀವ್ರತೆ ರಿಕ್ಟರ್ ಮಾಪನದಲ್ಲಿ 2.3 ದಾಖಲಾಗಿತ್ತು.

Last Updated : Jun 28, 2022, 10:34 AM IST

ABOUT THE AUTHOR

...view details