ಕೊಡಗು:ಲಂಚ ಪಡೆಯುತ್ತಿದ್ದ ವೇಳೆನ್ಯಾಯಾಲಯದ ಇಬ್ಬರು ಸಿಬ್ಬಂದಿಯನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಈ ಘಟನೆ ಕೊಡಗು ಜಿಲ್ಲೆಯ ಸಿದ್ದಾಪುರದಲ್ಲಿ ನಡೆದಿದೆ. ವಿನಯ್ ಹಾಗೂ ಲವಕುಮಾರ್ ಬಂಧಿತರು.
ನಕಲಿ ಚಿನ್ನಾಭರಣಗಳನ್ನು ಗಿರವಿ ಇಟ್ಟ ವಿಷಯದ ಬಗ್ಗೆ ಸುದ್ದಿ ಪ್ರಕಟವಾಗಿತ್ತು. ಈ ವರದಿ ಹಿನ್ನೆಲೆಯಲ್ಲಿ ಸಿದ್ಧಾಪುರದ ವರದಿಗಾರ ವಸಂತ ಎಂಬವರ ಮೇಲೆ ಸಹಕಾರ ಸಂಘದ ಅಧ್ಯಕ್ಷರು ಮಾನನಷ್ಟ ಮೊಕದ್ದಮೆ ಹೂಡಿದ್ದರು. ನ್ಯಾಯಾಲಯವು ವಸಂತನಿಗೆ ಪ್ರಕರಣದ ಸಂಬಂಧ ಒಂದು ಲಕ್ಷ ಹದಿನೆಂಟು ಸಾವಿರ ದಂಡ ವಿಧಿಸಿತ್ತು.
ಈ ಪ್ರಕರಣದ ಬಗ್ಗೆ ವಸಂತ ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ನ್ಯಾಯಾಲಯದ ಸಿಬ್ಬಂದಿ ಪ್ರತಿನಿತ್ಯವೂ ವಸಂತ ಅವರಿಗೆ ಕರೆ ಮಾಡಿ ರಾಜಿ ಮಾಡಿಸುತ್ತೇವೆ, ನಮಗೆ ಹತ್ತು ಸಾವಿರ ರೂಪಾಯಿ ಕೊಡಿ ಎಂದು ಬೇಡಿಕೆ ಇಟ್ಟಿದ್ದರಂತೆ. ಕೊನೆಗೆ ಐದು ಸಾವಿರ ನಂತರ ಮೂರು ಸಾವಿರ ರೂಪಾಯಿಗೆ ಒಪ್ಪಿಕೊಂಡರು. ಇಂದು ಮದ್ಯಾಹ್ನ ನ್ಯಾಯಾಲಯದ ಸಿಬ್ಬಂದಿ ವಿನಯ್ ಹಾಗೂ ಲವಕುಮಾರ್‌ಗೆ ವಸಂತ ಅವರು ಹಣನೀಡುವ ಸಂದರ್ಭದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:ಕೃಷಿ ಪಂಪ್‌ಸೆಟ್‍ಗಳಿಗೆ ಹಗಲು ವೇಳೆ 4 ಗಂಟೆ 3 ಪೇಸ್ ವಿದ್ಯುತ್ ಕೊಡಿ: ಪಕ್ಷಬೇಧ ಮರೆತು ಶಾಸಕರ ಒತ್ತಾಯ