ಕರ್ನಾಟಕ

karnataka

ETV Bharat / state

ಜಾಮೀನಿನ ಮೇಲೆ ಹೊರಬಂದಾತ ಆರೋಗ್ಯ ಇಲಾಖೆಯ ಲ್ಯಾಪ್​ಟಾಪ್ ಎಗರಿಸಿ ಸಿಕ್ಕಿಬಿದ್ದ!! - ಸರ್ಕಾರಿ ಲ್ಯಾಪ್​ಟಾಪ್

ಜಾಮೀನಿನ ಮೇಲೆ ಹೊರಬಂದ ಕಳ್ಳನೊಬ್ಬ ಮತ್ತೊಂದು ಕಳ್ಳತನಕ್ಕೆ ಇಳಿದು ಪೊಲೀಸರಿಗೆ ಅತಿಥಿಯಾದ ಘಟನೆ ನಡೆದಿದೆ.

kodagu
ಸುಮಂತ್

By

Published : Jun 3, 2021, 2:39 PM IST

ಕೊಡಗು:ಮಡಿಕೇರಿ ನಗರದ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಸಂಕೀರ್ಣದಿಂದ ಸರ್ಕಾರಿ ಲ್ಯಾಪ್​ಟಾಪ್ ಕಳವು ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಮಡಿಕೇರಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದ ಚೈನ್ ಗೇಟ್ ನಿವಾಸಿ ಸುಮಂತ್ (19) ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಆತನ ಬಳಿಯಿದ್ದ 40 ಸಾವಿರ ರೂ. ಮೌಲ್ಯದ ಲ್ಯಾಪ್​ಟಾಪ್ಅನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಸುಮಂತ್ ನಗರದ ಅಂಗಡಿಯೊಂದರ ಕಳವು ಪ್ರಕರಣದಲ್ಲಿ ಸೆರೆಯಾಗಿ ಜೈಲು ಸೇರಿದ್ದು, ಕಳೆದ 2 ದಿನಗಳ ಹಿಂದೆ ಜಾಮೀನಿನ ಮೇಲೆ ಹೊರ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಯ ವಿರುದ್ಧ ಮಡಿಕೇರಿ, ಕುಶಾಲನಗರ ಪೊಲೀಸ್ ಠಾಣೆಗಳಲ್ಲಿ ವಿವಿಧ ಕಳವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆ ಹಿನ್ನೆಲೆ:

ಮಂಗಳವಾರ ಸಂಜೆ 4 ಗಂಟೆಯ ಸಮಯದಲ್ಲಿ ಮಡಿಕೇರಿಯಲ್ಲಿನ ಜಿಲ್ಲಾ ಆರೋಗ್ಯ ಇಲಾಖೆ ಕಚೇರಿಯಲ್ಲಿ ಚಾರ್ಜ್​ಗೆ ಹಾಕಿದ್ದ ಸರಕಾರಿ ಲ್ಯಾಪ್​ಟಾಪ್ ನಾಪತ್ತೆಯಾಗಿತ್ತು. ಈ ಸರಕಾರಿ ಲ್ಯಾಪ್​ಟಾಪ್​ನಲ್ಲಿ ಕೋವಿಡ್ ಸಂಬಂಧಿತ ಡಾಟಾಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳ ಮಾಸಿಕ ವೇತನ ಮಾಹಿತಿ ಸಹಿತ ಎಲ್ಲಾ ಡಾಟಾಗಳು ಇದ್ದವು. ಈ ಲ್ಯಾಪ್​ಟಾಪ್​ನಲ್ಲಿ ಅಮೂಲ್ಯ ದಾಖಲಾತಿಗಳು ಇದ್ದ ಹಿನ್ನೆಲೆಯಲ್ಲಿ ಕಚೇರಿ ಸಿಬ್ಬಂದಿಗಳು ಈ ಕುರಿತು ಎಲ್ಲೆಡೆ ಹುಡುಕಾಡಿದ್ದರೂ ಕೂಡ ಲ್ಯಾಪ್​ಟಾಪ್ ಪತ್ತೆಯಾಗಿರಲಿಲ್ಲ.

ವೈದಾಧಿಕಾರಿ ಡಾ. ಆನಂದ್ ಇವರು ನಗರ ಪೊಲೀಸ್ ಠಾಣೆಗೆ ಲ್ಯಾಪ್​ಟಾಪ್ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ನಗರ ಪೊಲೀಸರು ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಸಂಕೀರ್ಣಕ್ಕೆ ತೆರಳಿ ತಾಂತ್ರಿಕ ಮಾಹಿತಿಗಳನ್ನು ಕಲೆ ಹಾಕಿದ್ದರು. ಬಳಿಕ ಚೈನ್​ಗೇಟ್ ನಿವಾಸಿ ಸುಮಂತ್ ಎಂಬಾತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ ಸಂದರ್ಭ ಕಳವು ಪ್ರಕರಣ ಪತ್ತೆಯಾಗಿದೆ. ಆತನ ಬಳಿಯಿದ್ದ ಸರಕಾರಿ ಲ್ಯಾಪ್​ಟಾಪ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details