ಕರ್ನಾಟಕ

karnataka

ETV Bharat / state

ಆಸ್ಪತ್ರೆಯ ಶವಾಗಾರದಲ್ಲಿ ಮಹಿಳೆಯರ ಶವದ ನಗ್ನ ಫೋಟೊ ತೆಗೆದು ವಿಕೃತಿ: ಆರೋಪಿ ಬಂಧನ - ಈಟಿವಿ ಭಾರತ ಕನ್ನಡ

ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಶವಾಗಾರಕ್ಕೆ ಬಂದ ಮಹಿಳೆಯರ ಶವದ ನಗ್ನ ಫೋಟೊ ತೆಗೆದು ವಿಕೃತಿ ಮೆರೆಯುತ್ತಿದ್ದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಮಡಿಕೇರಿ ಪೊಲೀಸರು ಬಂಧಿಸಿದ್ದಾರೆ.

Madikeri district hospital
ಶವದ ನಗ್ನ ಫೋಟೊ ತೆಗೆದು ವಿಕೃತಿ

By

Published : Nov 15, 2022, 4:29 PM IST

Updated : Nov 15, 2022, 5:53 PM IST

ಮಡಿಕೇರಿ : ಶವಾಗಾರಕ್ಕೆ ಬಂದ ಮಹಿಳೆಯರ ಶವದ ನಗ್ನ ಪೋಟೊ ತೆಗೆದು ವಿಕೃತಿ ಮೆರೆಯುತ್ತಿದ್ದ, ಆಸ್ಪತ್ರೆಯ ಶವಾಗಾರದಲ್ಲಿ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಮಡಿಕೇರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸೈಯದ್ ಎಂದು ಗುರುತಿಸಲಾಗಿದೆ.

ಮೊಬೈಲ್​ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ: ಬಂಧಿತ ಆರೋಪಿ ಸೈಯದ್​ ಮಡಿಕೇರಿಯಲ್ಲಿ ಮಹಿಳೆಯ ಮನೆಗೆ ನುಗ್ಗಿ ಮಾನಭಂಗಕ್ಕೆ ಯತ್ನಿಸಿದ್ದ. ಈ ವೇಳೆ ಮಹಿಳೆಯು ಕಿರುಚಾಡಿದ್ದು, ಆರೋಪಿ ಸೈಯದ್​ ಮನೆಯಿಂದ ಓಡಿ ಪರಾರಿಯಾಗಿದ್ದಾನೆ. ಈ ವೇಳೆ ಆತನ ಮೊಬೈಲ್​ ಮನೆಯಲ್ಲೇ ಬಿದ್ದಿದ್ದು, ಇದನ್ನು ಪರಿಶೀಲಿಸಿದಾಗ ಮಹಿಳೆಯರ ಶವದ ನಗ್ನ ಫೋಟೋಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸಂತ್ರಸ್ತರು ಮಡಿಕೇರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ಸಂಬಂಧ ಆರೋಪಿ ಸೈಯದ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ಬಗ್ಗೆ ಶಾಸಕರ ಪ್ರತಿಕ್ರಿಯೆ

ಬಂಧಿತ ಆರೋಪಿ ಸೈಯದ್​ ಮಡಿಕೇರಿಯಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಶವಾಗಾರದ ಜವಾನನಾಗಿ (ಒಳಗುತ್ತಿಗೆ) ಕೆಲಸ ಮಾಡುತ್ತಿದ್ದ. ಅಲ್ಲದೆ ಜಿಲ್ಲಾಸ್ಪತ್ರೆಯ ಮಹಿಳಾ ಸಿಬ್ಬಂದಿಯನ್ನು ತನಗೆ ಬೇಕಾದಂತೆ ಬಳಸಿಕೊಂಡಿದ್ದ ಎಂಬ ಆರೋಪವು ಕೇಳಿಬಂದಿತ್ತು. ಜೊತೆಗೆ ಶವಾಗಾರಕ್ಕೆ ಬರುವ ಸಾಕಷ್ಟು ಹೆಣ್ಣು ಮಕ್ಕಳ ಮೃತದೇಹದ ಫೋಟೋಗಳನ್ನು ತನ್ನ ಮೊಬೈಲ್ ನಲ್ಲಿ ಗೌಪ್ಯವಾಗಿ ಇಟ್ಟುಕೊಂಡಿದ್ದ ಎಂದು ಹೇಳಲಾಗ್ತಿದೆ. ಸದ್ಯ ಆರೋಪಿ ಸೈಯದ್​ನನ್ನು ಕೆಲಸದಿಂದ ವಜಾಗೊಳಿಸಲಾಗಿದೆ.

ಇನ್ನು ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಶಾಸಕ ಅಪ್ಪಚ್ಚು ರಂಜನ್​, ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಇನ್ನು ಮಹಿಳೆಯರು ಯಾರೂ ಆರೋಪಿ ಬಗ್ಗೆ ದೂರು ದಾಖಲಿಸದಿರುವ ಬಗ್ಗೆ, ನಾನು ಆಸ್ಪತ್ರೆಯ ಡೀನ್​ನಲ್ಲಿ ಮಾತನಾಡುವುದಾಗಿ ಹೇಳಿದರು.

ಇದನ್ನೂ ಓದಿ :ಬಂಟ್ವಾಳ: ಸಿಡಿಲು ಬಡಿದು ಬಾಲಕ ಸಾವು

Last Updated : Nov 15, 2022, 5:53 PM IST

ABOUT THE AUTHOR

...view details