ಕೊಡಗು: ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದೆ. 2018ರ ಜಲಪ್ರಳಯದ ಕಹಿ ನೆನಪು ಮಾಸುವ ಮುನ್ನವೇ ಇದೀಗ ಭುವಿಯೊಡಲಿನಿಂದ ಭಾರಿ ಪ್ರಮಾಣದ ಶಬ್ದ ಕೇಳಿ ಬಂದಿದೆ. ಬೆಟ್ಟದ ಮೇಲೆ ದೊಡ್ಡ ಮಟ್ಟದಲ್ಲಿ ಬಿರುಕು ಕಾಣಿಸಿಕೊಂಡಿದೆ.
ಮಡಿಕೇರಿ: ಭೂಮಿಯಿಂದ ಕೇಳಿಬಂದ ಭಾರಿ ಪ್ರಮಾಣದ ಶಬ್ದ, ನಿಶಾನಿ ಬೆಟ್ಟದಲ್ಲಿ ಬಿರುಕು - ಮಡಿಕೇರಿ ಭಾರಿ ಮಳೆ
ಮಡಿಕೇರಿ ತಾಲೂಕಿನಲ್ಲಿ ಭಾರಿ ಪ್ರಮಾಣದ ಶಬ್ದ ಕೇಳಿ ಬಂದಿದ್ದು, ನಿಶಾನಿ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡಿದೆ.
ನಿಶಾನಿ ಬೆಟ್ಟದಲ್ಲಿ ಬಿರುಕು
ಮಡಿಕೇರಿ ತಾಲೂಕಿನ 2ನೇ ಮೊಣ್ಣಂಗೇರಿಯಲ್ಲಿ ರಾತ್ರಿ ಭಾರಿ ಶಬ್ಧ ಕೇಳಿಬಂದ ಹಿನ್ನೆಲೆಯಲ್ಲಿ ಗಾಬರಿಗೊಂಡು ಸ್ಥಳೀಯರು ಕೂಡಲೇ ಮನೆಯಿಂದ ಓಡಿ ಬಂದಿದ್ದಾರೆ. ಜೊತೆಗೆ ರಾಮಕೊಲ್ಲಿ ಸೇತುವೆ ಕೆಳಗೆ ಕೇಸರಿಬಣ್ಣದ ಮಣ್ಣು ಹರಿದು ಬರುತ್ತಿದ್ದು, ಸೇತುವೆ ಅಕ್ಕ ಪಕ್ಕದಲ್ಲಿ ಶೇಖರಣೆಯಾಗುತ್ತಿದೆ. ಇನ್ನೊಂದೆಡೆ, ಮಡಿಕೇರಿ ನಗರಕ್ಕೆ ಹೊಂದಿಕೊಂಡಿರುವ ನಿಶಾನಿ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಇಲ್ಲಿನ ಜನ ಭಯದಲ್ಲಿ ಬದುಕುವಂತಾಗಿದೆ.
ಇದನ್ನೂ ಓದಿ:ಬೀಳುವ ಹಂತದಲ್ಲಿ ಸೇತುವೆ.. ಜೀವ ಭಯದಲ್ಲೇ ಮಡಿಕೇರಿ ಜನರ ಸಂಚಾರ
Last Updated : Jul 22, 2022, 1:15 PM IST