ಕೊಡಗು: ದಿನ ಕಳೆದಂತೆ ಜಿಲ್ಲೆಯಲ್ಲಿ ಕೊರೊನಾ ಉಲ್ಬಣಿಸುತ್ತಿದ್ದು, ಇಂದು ಹೊಸದಾಗಿ 9 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 131ಕ್ಕೆ ಏರಿಕೆಯಾಗಿದೆ.
ಈ ಹಿಂದೆ ಸೋಂಕು ದೃಢಪಟ್ಟಿದ್ದ ವಿರಾಜಪೇಟೆ ತಾಲೂಕಿನ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 65 ವರ್ಷದ ಮಹಿಳೆ, 32 ವರ್ಷದ ಪುರುಷ, 45 ವರ್ಷದ ಪುರುಷ , 35 ವರ್ಷದ ಮಹಿಳೆ, 20 ವರ್ಷದ ಪುರುಷ, 19 ವರ್ಷದ ಹುಡುಗ ಮತ್ತು 45 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ. ಜೊತೆಗೆ ವಿರಾಜಪೇಟೆ ತಾಲೂಕಿನ ಅಪ್ಪಯ್ಯ ಸ್ವಾಮಿ ನಿವಾಸಿಯಾದ 55 ವರ್ಷದ ಮಹಿಳೆಗೆ ಮತ್ತು ಕುಟ್ಟ ಗ್ರಾಮದ 34 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ವಿರಾಜಪೇಟೆಯ ಅಪ್ಪಯ್ಯ ಸ್ವಾಮಿ ರಸ್ತೆ, ಗೋಣಿಕೊಪ್ಪ ಹಾಗೂ ಕುಟ್ಟ ಸೇರಿದಂತೆ 53 ಪ್ರದೇಶಗಳನ್ನು ಕಂಟೇನ್‌ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಸರ್ಕಾರದ ನಿಯಮದಂತೆ ಅವಧಿ ಮುಕ್ತಾಯದ ಬಳಿಕ ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ, ಮಡಿಕೇರಿ ತಾಲೂಕಿನ ಕಗ್ಗೋಡ್ಲು, ತಾಳತ್ತಮನೆ, ಮಡಿಕೇರಿಯ ಕೋಟೆ ಮಾರಿಯಮ್ಮ ದೇವಸ್ಥಾನ ರಸ್ತೆ, ಪುಟಾಣಿ ನಗರ, ಸೋಮವಾರಪೇಟೆ ತಾಲೂಕಿನ ಮುಳ್ಳೂರು, ಬಳಗುಂದ ಹಾಗೂ ಕುಶಾಲನಗರದ ರಥಬೀದಿಯನ್ನು ಕಂಟೇನ್‌ಮೆಂಟ್ ಝೋನ್ನಿಂದ ತೆರವುಗೊಳಿಸುವುದಾಗಿ ಜಿಲ್ಲಾಡಳಿತ ತಿಳಿಸಿದೆ.
ಜಿಲ್ಲೆಯಲ್ಲಿರುವ ದೃಢಪಟ್ಟಿರುವ ಒಟ್ಟು 131 ಪಾಸಿಟಿವ್ ಪ್ರಕರಣಗಳಲ್ಲಿ ಆಸ್ಪತ್ರೆಯಿಂದ 18 ಜನ ಬಿಡುಗಡೆಗೊಂಡಿದ್ದು, 112 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ ಓರ್ವರು ಮೃತಪಟ್ಟಿದ್ದಾರೆ.